See also 1heavy  3heavy
2heavy ಹೆವಿ
ನಾಮವಾಚಕ
(ಬಹುವಚನ heavies)
  1. (ಆಡುಮಾತು) ಧಾಂಡಿಗ; ಠೊಣೆಯ; ಘಾತುಕ.
  2. (ಸಾಮಾನ್ಯವಾಗಿ ಬಹುವಚನದಲ್ಲಿ)(ನಾಟಕ ಮೊದಲಾದವುಗಳಲ್ಲಿ):
    1. ಭವ್ಯ ಯಾ ಗಂಭೀರ ಪಾತ್ರ.
    2. ಭವ್ಯ ಯಾ ಗಂಭೀರಪಾತ್ರವನ್ನು ವಹಿಸುವ ನಟ.
    3. ಖಳನಾಯಕನ ಪಾತ್ರ: Iago is the heavy in Othello ಒಥೆಲೋ ನಾಟಕದಲ್ಲಿ ಇಯಾಗೋ ಖಳನಾಯಕ.
  3. (ಆಡುಮಾತು) ಗಂಭೀರವಾದ ವೃತ್ತಪತ್ರಿಕೆ; ಲಘು ವಿಷಯಗಳನ್ನು ಯಾ ಲಘು ಶೈಲಿಯಲ್ಲಿ ಬರೆಯದ ವೃತ್ತಪತ್ರಿಕೆ.
  4. ದೊಡ್ಡ, ಭಾರಿ – ವಸ್ತು; ದೊಡ್ಡದಾಗಿಯೂ ಭಾರವಾಗಿಯೂ ಇರುವ ವಸ್ತು, ಉದಾಹರಣೆಗೆ ವಾಹನ.
  5. (ಉಡುಪಿನ ಒಳಗೆ ಧರಿಸುವ) ಭಾರವಾದ ದಪ್ಪ ಒಳತೊಡಿಗೆ.
  6. (ಬಹುವಚನದಲ್ಲಿ) ಹಿರಂಗಿದಳ.
ಪದಗುಚ್ಛ

The Heavies

  1. ಭಾರೀ ಪಿರಂಗಿಗಳು.
  2. ಭಾರಿ ಫಿರಂಗಿದಳ.
  3. ಸೇನೆಯ ಯಾ ಯಾವುದೇ ಮಿಲಿಟರಿ ದಳದ ಭಾರಿ ಟ್ಯಾಂಕುಗಳು.
  4. ಭಾರಿ ಬಾಂಬರ್‍ ವಿಮಾನಗಳು.