See also 2heavy  3heavy
1heavy ಹೆವಿ
ಗುಣವಾಚಕ
( ತರರೂಪ heavier, ತಮರೂಪ heaviest)
  1. ತೂಕವಾದ; ಭಾರವಾದ; ಹೆಚ್ಚು ತೂಕದ; ವಜನ್‍ ಉಳ್ಳ.
    1. (ಮಂಜು ಮೊದಲಾದವುಗಳ ವಿಷಯದಲ್ಲಿ) ತೀರ ಒತ್ತಾದ; ಬಹಳ ಸಾಂದ್ರವಾದ; ಸಾಂದ್ರತೆ ಹೆಚ್ಚಾಗಿರುವ; ದಟ್ಟೈಸಿದ.
    2. (ಭೌತವಿಜ್ಞಾನ) ಭಾರ; ಸಾಮಾನ್ಯವಾಗಿರುವುದಕ್ಕಿಂತ ಹೆಚ್ಚಾದ ದ್ರವ್ಯರಾಶಿ ಇರುವ (ಮುಖ್ಯವಾಗಿ ಐಸೊಟೋಪ್‍ಗಳನ್ನೊಳಗೊಂಡ ಸಂಯುಕ್ತಗಳ ವಿಷಯದಲ್ಲಿ): heavy hydrogen ಭಾರ ಹೈಡ್ರೊಜನ್‍.
  2. ಭಾರಿ; ತುಂಬ; ಸಮೃದ್ಧ; ವಿಪುಲ; ಮೊತ್ತ, ಸಂಖ್ಯೆ ಯಾ ಗಾತ್ರದಲ್ಲಿ ದೊಡ್ಡ: heavy vote ಭಾರಿ ಮತಗಳುa heavy crop ಸಮೃದ್ಧವಾದ ಬೆಳೆ; ತುಂಬು ಬೆಳೆ.
  3. ಬಲವಾದ; ಬಿರುಸಾದ; ಉಗ್ರವಾದ; ತೀವ್ರವಾದ; ಪ್ರಚಂಡ; ಪ್ರಬಲ; ಪ್ರಕ್ಷುಬ್ಧ; ಬಲವಾಗಿ ಬಡಿಯುವ ಯಾ ಬೀಳುವ: heavy blows ಬಲವಾದ ಹೊಡೆತ; ಬಿರುಸೇಟುheavy storm ಚಂಡಮಾರುತ; ಭಾರಿ ಬಿರುಗಾಳಿa heavy sea ಬಿರುಗಡಲು; ಜೋರಾಗಿ ಅಪ್ಪಳಿಸುವ ಯಾ ಪ್ರಕ್ಷುಬ್ಧವಾದ ಸಮುದ್ರheavy fighting ಬಿರುಸಾದ, ಉಗ್ರವಾದ ಹೋರಾಟheavy sleep ಗಾಢವಾದ ನಿದ್ರೆheavy rain ಬಿರುಸಾದ ಮಳೆ.
  4. ಭಾರಿ; ಅತಿ; ಬಿರುಸಾಗಿ, ತೀವ್ರವಾಗಿ, ವ್ಯಾಪಕವಾಗಿ ಯಾ ಅತಿಯಾಗಿ – ವರ್ತಿಸುವ, ಕೆಲಸ ಮಾಡುವ: a heavy drinker ಅತಿ ಕುಡುಕheavy loser ಭಾರಿ ನಷ್ಟ ಅನುಭವಿಸುವವ.
  5. (ಸಮುದ್ರದ ವಿಷಯದಲ್ಲಿ) ಭಾರಿ ಯಾ ಬಲವಾದ ಅಲೆಗಳುಳ್ಳ.
  6. (ಯಂತ್ರ, ಫಿರಂಗಿ, ಮೊದಲಾದವುಗಳ ವಿಷಯದಲ್ಲಿ) ಭಾರಿ; ದೊಡ್ಡ ಗಾತ್ರದ.
  7. ಭಾರಿ; ತೀವ್ರ ಆಘಾತ ಉಂಟುಮಾಡುವ; ಬಲವಾಗಿ ಪೆಟ್ಟು ಬೀಳುವ: heavy fall ಭಾರಿ ಪತನ; ತೀವ್ರ ಆಘಾತ ಉಂಟುಮಾಡುವ ಪತನ.
  8. ಶ್ರಮಸಾಧ್ಯ; ಕಷ್ಟಸಾಧ್ಯ; ಬಹಳ ದೈಹಿಕ ದುಡಿಮೆ ಬೇಕಾಗುವ: heavy work ಶ್ರಮದ, ಕಷ್ಟದ – ಕೆಲಸ.
  9. ಹೊರೆಯಾದ; ಭಾರವಾದ; ಹೊರಲಾರದ; ದುರ್ಭರ; ಗಾತ್ರ, ತೂಕ ಯಾ ಆಕಾರದಿಂದಾಗಿ ಹೊರಲಾಗದ ಯಾ ನಿರ್ವಹಿಸಲಾಗದ: heavy taxes ಹೊರಲಾಗದ ತೆರಿಗೆಗಳು.
  10. ಭಾರಿ; ಭಾರವಾದ ಆಯುಧಗಳನ್ನು ಒಯ್ಯುವ, ಹೊತ್ತಿರುವ: the heavy brigade ಭಾರಿ ಶಸ್ತ್ರಸಜ್ಜಿತ ದಳ.
  11. (ವ್ಯಕ್ತಿ, ಬರೆಹ, ಸಂಗೀತ, ಮೊದಲಾದವುಗಳ ವಿಷಯದಲ್ಲಿ) ಗಂಭೀರ; ವಿಷಣ್ಣ; ನೀರಸವಾದ.
  12. (ಆಹಾರದ ವಿಷಯದಲ್ಲಿ) ಗಡುಸಾದ; ಅರಗದ; ಸುಲಭವಾಗಿ ಜೀರ್ಣವಾಗದ: bacon is a coarse and heavy food ಹಂದಿಯ ಮಾಂಸ ಒರಟಾದ ಹಾಗೂ ಗಡುಸಾದ ಆಹಾರ.
  13. (ಸ್ವಭಾವದ ವಿಷಯದಲ್ಲಿ) ಶ್ರೀಮದ್ಗಂಭೀರವಾದ; ಅತಿಶಿಸ್ತಿನ; ತೀರ ಕಟ್ಟುನಿಟ್ಟಾದ: heavy father ಶ್ರೀಮದ್ಗಂಭೀರನಾದ ತಂದೆ(ಯ ಪಾತ್ರ).
  14. (ಮನುಷ್ಯರ ವಿಷಯದಲ್ಲಿ) ಜಡ; ಮಂದಬುದ್ಧಿಯ.
  15. (ಬ್ರೆಡ್‍ ಮೊದಲಾದವುಗಳ ವಿಷಯದಲ್ಲಿ) (ಹುದುಗು ಸರಿಯಾಗಿ ಬಾರದೆ ಉಬ್ಬಿಕೊಳ್ಳದ್ದರಿಂದ) ದಟ್ಟವಾದ; ಗಟ್ಟಿಯಾದ; ಸರಿಯಾಗಿ ನಾದದಿರುವ.
  16. (ನೆಲದ ವಿಷಯದಲ್ಲಿ) ಜಿಗುಟಾದ; ಮಣ್ಣು ಅಂಟಿಕೊಳ್ಳುವ; ಪ್ರಯಾಣಕ್ಕೆ ಕಷ್ಟವಾದ, ತೊಡಕಾದ.
  17. ಕ್ರೂರ; ಕಟು; ಕರಾಳ; ಉಗ್ರ; ಪೀಡಕ: a heavy fate ಕ್ರೂರ ವಿಧಿheavy demands ಕ್ರೂರ ಬೇಡಿಕೆಗಳು.
  18. ದಪ್ಪನಾದ; ಸ್ಥೂಲವಾದ; ಅಗಲವಾದ; ಸೂಕ್ಷ್ಮವಲ್ಲದ; ನಾಜೂಕಾಗಿರದ; ಒರಟೊರಟಾದ: heavy lines ದಪ್ಪ, ಪಂಕ್ತಿಗಳು; ಒರಟು ಸಾಲುಗಳು.
  19. (ಆಕಾರದಲ್ಲಿ ಯಾ ಪ್ರಭಾವದಲ್ಲಿ) ಒಡ್ಡೊಡ್ಡಾದ; ಒರಟಾದ; ನಾಜೂಕಿಲ್ಲದ: heavy features ಒಡ್ಡೊಡ್ಡಾದ ಮೈಮಾಟ.
  20. ಅತಿ ಭಾರವಾದ; ಒಡ್ಡೊಡ್ಡಾದ.
  21. ತುಂಬಿದ; ಭರ್ತಿಯಾದ; ಇನ್ನಾವುದೋ ಒಂದು ತುಂಬಿ ಭಾರವಾದ: words heavy with meaning ಅರ್ಥಭರಿತ ಪದಗಳುthe air heavy with rich fragrance ಗಾಢ ಪರಿಮಳ ತುಂಬಿದ ಗಾಳಿ.
  22. (ಆಕಾಶದ ವಿಷಯದಲ್ಲಿ) ಮೋಡ ಕವಿದ, ಮುಚ್ಚಿದ, ಮುಸುಕಿದ, ಆವರಿಸಿದ.
  23. (ಕಲಾಕೃತಿ ಯಾ ಸಾಹಿತ್ಯಕೃತಿಯ ವಿಷಯದಲ್ಲಿ) ಕಳೆಕಟ್ಟದ; ನೀರಸ; ಬೇಸರ ಹಿಡಿಸುವ; ಸುಲಭವಾಗಿ ಅರ್ಥವಾಗದ: heavy style ನೀರಸ ಶೈಲಿ.
  24. (ನಾಟಕದ ವಸ್ತು, ಪಾತ್ರದ ವಿಷಯದಲ್ಲಿ):
    1. ಗಂಭೀರವಾದ; ಲಘುವಲ್ಲದ; ಹುಡುಗಾಟಿಕೆಯದಲ್ಲದ; ಸಂಯಮದಿಂದ ಕೂಡಿದ.
    2. ವಿಷಣ್ಣ; ನಿರುತ್ಸಾಹದ; ಉತ್ಸಾಹಗುಂದಿದ; ನಿರಾಶೆಯ; ದುಃಖಿತ: heavy villain ವಿಷಣ್ಣ ಖಳನಾಯಕ.
  25. ದುಃಖಕರ; ಶೋಕದಾಯಕ; ದುಃಖ – ಸೂಸುವ, ಸೂಚಿಸುವ: heavy news ದುಃಖವಾರ್ತೆ; ಶೋಕವಾರ್ತೆ.
  26. (ನಿದ್ದೆ, ಆಯಾಸ, ಮೊದಲಾದವುಗಳಿಂದ) ಭಾರವಾದ; ಜಡ; ಅಲಸ; ಲವಲವಿಕೆಯಿಲ್ಲದ: with eyelids heavy and red ನಿದ್ದೆಯಿಂದ ಭಾರವಾದ, ಕೆಂಪಾದ ಕಣ್ಣೆವೆಗಳು.
  27. ಭಾರಿ; ದೀರ್ಘ; ವ್ಯಾಪಕ: a heavy applause ಸುದೀರ್ಘ, ಭಾರಿ – ಕರತಾಡನ.
  28. ಅತಿ ಇಳಿಜಾರಾದ; ಇಳಿಯುತ್ತ ಹೋಗುವ: heavy grade ವಿಪರೀತ ಕಡಿದಾದ ಇಳುಕಲು.
  29. (ಜ್ಯಾಸ್‍ ಸಂಗೀತ ಮೊದಲಾದವುಗಳ ವಿಷಯದಲ್ಲಿ) ಗಂಭೀರವಾದ; ಪ್ರಭಾವಶಾಲಿ.
  30. (ಆಡುಮಾತು) ಪಶುಬಲವನ್ನು, ಪಾಶವೀಶಕ್ತಿಯನ್ನು ಬಳಸುವ.
  31. (ಸಮಾಚಾರ ಪತ್ರಿಕೆ ಮೊದಲಾದವುಗಳ ವಿಷಯದಲ್ಲಿ) ಗಂಭೀರ – ನೀತಿಯ, ರೀತಿಯ, ಶೈಲಿಯ, ಧ್ವನಿಯ, ಧೋರಣೆಯ.
ಪದಗುಚ್ಛ
  1. heavy in hand = ಪದಗುಚ್ಛ \((2)\).
  2. heavy on hand:
    1. (ಕುದುರೆಯ ವಿಷಯದಲ್ಲಿ) ಕಡಿವಾಣದ ಮೇಲೆ ಜೋತಬಿದ್ದ.
    2. (ರೂಪಕವಾಗಿ) ಜಡ; ಸಂತೋಷಪಡಿಸಲು ಕಷ್ಟವಾದ: she will find him heavy on hand ಅವನನ್ನು ಸಂತೋಷಪಡಿಸುವುದು ಅವಳಿಗೆ ಕಷ್ಟವಾಗುತ್ತದೆ.
ನುಡಿಗಟ್ಟು
  1. heavy with child ಗರ್ಭಿಣಿಯಾದ; ಬಸಿರಾದ.
  2. lie heavy ಭಾರವಾಗಿ ಕುಳಿತಿರು; ಹೊರೆಯಾಗಿರು.
  3. time hangs heavy ಹೊತ್ತು ಹೋಗುವುದಿಲ್ಲ; ಹೊತ್ತು ಕಳೆಯುವುದು ಕಷ್ಟ.