See also 2ham  3ham
1ham ಹ್ಯಾಮ್‍
ನಾಮವಾಚಕ
  1. ಹಿಂತೊಡೆ; ತೊಡೆಯ ಹಿಂಭಾಗ; ಊರುಪೃಷ್ಠ; ಪಶ್ಚೋರು.
  2. ಹಿಂತೊಡೆ ಮತ್ತು ಪಿರ್ರೆ (ನಿತಂಬ).
  3. (ಪ್ರಾಚೀನ ಪ್ರಯೋಗ) ಮೊಣಕಾಲ ಬಾಗು.
  4. (ಆಹಾರಕ್ಕಾಗಿ) ಉಪ್ಪೂರಿಸಿ ಹೊಗೆಯಲ್ಲಾಗಲಿ ಬೇರೆ ರೀತಿಯಲ್ಲಾಗಲಿ ಒಣಗಿಸಿದ ಹಂದಿಯ ತೊಡೆ ಯಾ ಅದರ ಮಾಂಸ.
  5. (ಅಶಿಷ್ಟ) ಹವ್ಯಾಸಿ; ವಿಲಾಸಿ; ವೃತ್ತಿಪರನಲ್ಲದವನು.
  6. (ಅಶಿಷ್ಟ) ಅಡ್ಡಕಸುಬಿ;
    1. ಅನನುಭವಿ ಯಾ ಪರಿಣಾಮಕಾರಿಯಲ್ಲದ – ನಟ ಯಾ ಅಭಿನಯ.
    2. ಅಕುಶಲ – ನರ್ತಕ, ಸಂಗೀತಗಾರ ಯಾ ಸಾಹಸಕಾರ್ಯ ಪ್ರದರ್ಶಕ.
  7. (ನಾಟಕರಂಗದ ಅಶಿಷ್ಟ) ಆರ್ಭಟಕ; ಕಿರುಚಾಡುತ್ತ ಅತಿರೇಕದಿಂದ ಅಭಿನಯಿಸುವ ನಟ.
ಪದಗುಚ್ಛ

radio ham ಹವ್ಯಾಸಿ ರೇಡಿಯೋ ಆಪರೇಟರು; ವಿಲಾಸಕ್ಕಾಗಿ, ಹವ್ಯಾಸಕ್ಕಾಗಿ ರೇಡಿಯೋ ಸ್ಟೇಷನ್ನನ್ನು ನಡೆಸುವವನು.