See also 1guarantee
2guarantee ಗ್ಯಾರಂಟೀ
ಸಕರ್ಮಕ ಕ್ರಿಯಾಪದ
  1. (ಕರಾರು ಮೊದಲಾದವುಗಳ ಪಾಲನೆಗೆ ವಸ್ತುವಿನ ಸಾಚಾತನಕ್ಕೆ) ಹೊಣೆಯಾಗು; ಹೊಣೆಯಾಗಿರು; ಗ್ಯಾರಂಟಿಯಾಗು; ಜವಾಬ್ದಾರನಾಗಿರು; ಭರವಸೆಕೊಡು; ಖಾತರಿ ಕೊಡು; ಒಂದು ವಸ್ತುವಿನ ಭದ್ರತೆಗೆ, ಸ್ಥಿರತೆಗೆ – ನಂಬಿಕೆ ನೀಡು, ಭರವಸೆ ಕೊಡು, ಖಾತರಿ ಕೊಡು.
  2. ಸಂಭವವಿದೆಯೆಂದು, ಸಂಭವಿಸುವುದೆಂದು – ಭರವಸೆ ಕೊಡು, ಮಾತುಕೊಡು, ಖಂಡಿತವಾಗಿ ಹೇಳು: I guarantee that I will be there ನಾನು ಅಲ್ಲಿರುತ್ತೇನೆಂದು ಖಂಡಿತವಾಗಿ ಹೇಳುತ್ತೇನೆ.
  3. (ಒಂದು ವಸ್ತುವಿನ ಸ್ವಾಧೀನವನ್ನು, ಅದನ್ನು ಪಡೆಯುವ ಹಕ್ಕನ್ನು ಒಬ್ಬನಿಗೆ ಕೊಡಿಸುವುದಾಗಿ) ಗ್ಯಾರಂಟಿ ಕೊಡು; ಭರವಸೆಕೊಡು.
  4. (ಅಪಾಯ ಮೊದಲಾದವು ಆಗದಂತೆ) ಗ್ಯಾರಂಟಿ ಕೊಡು; ಭರವಸೆ ಕೊಡು; ಜವಾಬ್ದಾರಿ ವಹಿಸು.