See also 1gloom
2gloom ಗ್ಲೂಮ್‍
ಸಕರ್ಮಕ ಕ್ರಿಯಾಪದ
  1. ಮಬ್ಬಾಗಿಸು; ಮಸುಕಾಗಿಸು.
  2. ಮಂಕುಗವಿಸು; ವಿಷಣ್ಣಗೊಳಿಸು; ಮ್ಲಾನಗೊಳಿಸು; ಗ್ಲಾನಿಯುಂಟುಮಾಡು.
  3. ಅಂಧಕಾರಗೊಳಿಸು; ಕತ್ತಲು ಕವಿದಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ಹುಬ್ಬು ಗಂಟಿಕ್ಕು; ಸಿಡುಕುಗೊಂಡಂತೆ ಕಾಣು; ಗಂಟುಮೋರೆ ಹಾಕಿಕೊ; ಮುಖ ಸಿಂಡರಿಸು.
  2. (ಆಕಾಶ ಮೊದಲಾದವುಗಳ ವಿಷಯದಲ್ಲಿ)
    1. ಮಬ್ಬುಗವಿದಿರು; ಮೋಡ ಮುಚ್ಚಿರು; ಮಂಕು ಕವಿದಿರು.
    2. (ಬಿರುಮಳೆ ಬರುವಂತೆ) ಮಂಕು ಕವಿದಿರು; ಭಯಂಕರವಾಗಿರು.
  3. ಕಪ್ಪಾಗಿ, ಮಸುಕು ಮಸುಕಾಗಿ ಯಾ ಅಸ್ಪಷ್ಟವಾಗಿ ಕಾಣು.
  4. ಮಂಕಾಗಿರು; ಮ್ಲಾನವಾಗಿರು; ಖಿನ್ನವಾಗಿರು; ವಿಷಾದದಿಂದ ಕೂಡಿರು.