See also 2glance  3glance
1glance ಗ್ಲಾನ್ಸ್‍
ಸಕರ್ಮಕ ಕ್ರಿಯಾಪದ
  1. (ವಸ್ತು ಮೊದಲಾದವುಗಳ ಕಡೆಗೆ ಯಾ ಮೇಲೆ) ಕಣ್ಣನ್ನು ಹಾಯಿಸು; ದೃಷ್ಟಿಯನ್ನು ಬೀರು.
  2. (ಕ್ರಿಕೆಟ್‍) (ಚೆಂಡನ್ನು) ಓರೆಹೊಡೆತದಿಂದ ಹೊಡೆ, ತಿರುಗಿಸು.
ಅಕರ್ಮಕ ಕ್ರಿಯಾಪದ
  1. (ಆಯುಧದ ವಿಷಯದಲ್ಲಿ) (ಗುರಿಯನ್ನು ನೇರವಾಗಿ ಬಡಿಯದೆ ಅದರ ಮೇಲಿಂದ) ಜಾರಿಬಿಡು; ಸವರಿಕೊಂಡು ಹೋಗು.
  2. (ಹೊಳೆಯುವ ವಸ್ತುವಿನ ಯಾ ಬೆಳಕಿನ ವಿಷಯದಲ್ಲಿ) ಮಿಂಚು; ಥಟ್ಟನೆ ಹೊಳೆಯು; ಮಿನುಗು; ಸ್ಫುರಿಸು; ಪ್ರಭೆಬೀರು.
  3. (ಕಣ್ಣಿನ ವಿಷಯದಲ್ಲಿ) ಕಣ್ಣೋಡಿಸು; ದೃಷ್ಟಿಹಾಯಿಸು; ಕ್ಷಣಕಾಲ ನೋಟ ಹಾಯಿಸು; ಮಿನುಗುನೋಟ ಬೀರು.
  4. (ಮಾತಿನ, ಮಾತಾಡುವವನ ವಿಷಯದಲ್ಲಿ) ಜಾರಿಸು; ತೇಲಿಸು; ವಿಷಯ ಬಿಟ್ಟು ಯಾ ವಿಷಯದಿಂದ ವಿಷಯಕ್ಕೆ ಬೇಗ – ಸರಿ, ಹೋಗು, ಬದಲಾಯಿಸು.
  5. (ಕ್ರಿಕೆಟ್‍) ಓರೆಹೊಡೆತ ಹೊಡೆ; ಚೆಂಡನ್ನು ಓರೆಹೊಡೆತದಿಂದ ತಿರುಗಿಸು.
ಪದಗುಚ್ಛ
  1. glance at
    1. ಪ್ರಾಸಂಗಿಕವಾಗಿ (ಮತ್ತು ಸಾಮಾನ್ಯವಾಗಿ ವ್ಯಂಗ್ಯವಾಗಿ) – ಪ್ರಸ್ತಾಪಿಸು, ಸೂಚಿಸು.
    2. ಕ್ಷಣನೋಟ ಬೀರು; ಕ್ಷಣಮಾತ್ರ ನೋಡು.
  2. glance down, up, etc. (ಮೇಲಿಂದ ಕೆಳಕ್ಕೆ, ಕೆಳಗಿಂದ ಮೇಲಕ್ಕೆ, ಇತ್ಯಾದಿ) ದೃಷ್ಟಿ ಹಾಯಿಸು; ಕಣ್ಣಾಡಿಸು.
  3. glance one’s eye (ಒಂದರ ಮೇಲೆ) ಕಣ್ಣುಹಾಯಿಸು; ದೃಷ್ಟಿ ಬೀರು.
  4. glance over ಸ್ಥೂಲವಾಗಿ ಓದು; ಮೇಲೆ ಮೇಲೆ ಓದು; ಕಣ್ಣು ಹಾಯಿಸುತ್ತಾ ಓದು.