See also 2fuss
1fuss ಹಸ್‍
ನಾಮವಾಚಕ
  1. ಗಡಿಬಿಡಿ; ಗಲಿಬಿಲಿ; ಗೊಂದಲ; (ಅತಿ) ಸಡಗರ; ಸಂಭ್ರಮ; ಆಡಂಬರದ ಓಡಾಟ; ಕಾತರದ ಚಟುವಟಿಕೆ: such a fuss about their devotions ತಮ್ಮ ಭಕ್ತಿಯ ಬಗ್ಗೆ ಅಷ್ಟೊಂದು ಗಡಿಬಿಡಿ.
  2. ಅತಿಶಯಿಕೆ; ಅತಿಮಾಡುವುದು; ಅಲ್ಪ ವಿಷಯಗಳನ್ನು ಮುಖ್ಯವೆಂದು ಭಾವಿಸುವುದು; ದೊಡ್ಡದುಮಾಡುವುದು: don’t make so much fuss about trifles ಅಲ್ಪ ವಿಷಯಗಳನ್ನು ಅಷ್ಟೊಂದು ದೊಡ್ಡದು ಮಾಡಬೇಡ.
  3. ನಸನಸೆ; ಸಣ್ಣಪುಟ್ಟ ವಿವರಗಳಿಗೆ ಅತಿ ಹೆಚ್ಚಿನ ಗಮನ.
  4. ಚರ್ಚೆ; ವಾಗ್ವಾದ: ಜಗಳ: a fuss about who should wash dishes ತಟ್ಟೆಗಳನ್ನು ಯಾರು ತೊಳೆಯಬೇಕೆಂಬ ವಿಷಯದಲ್ಲಿ ಚರ್ಚೆ.
  5. (ಆಡುಮಾತು) ಗಡಿಬಿಡಿ ಆಸಾಮಿ; ಸಡಗರ ಮಾಡುವವ.
ನುಡಿಗಟ್ಟು
  1. make a fuss ಜೋರಾಗಿ ಅಸಮಾಧಾನ ಸೂಚಿಸು, ದೂರು.
  2. make a fuss of (or over) ಅತಿ ಆಡು; ಅತಿ ಪ್ರೀತಿ ಯಾ ಗೌರವ ಪ್ರದರ್ಶಿಸು.