See also 2funeral
1funeral ಹ್ಯೂನರಲ್‍
ಗುಣವಾಚಕ

ಶವಸಂಸ್ಕಾರದ; ಉತ್ತರಕ್ರಿಯೆಯ; ಅಂತ್ಯಕ್ರಿಯೆಯ; ಶವಸಂಸ್ಕಾರದಲ್ಲಿ ಬಳಸುವ; ಉತ್ತರಕ್ರಿಯೆಯಲ್ಲಿ ಉಪಯೋಗಿಸುವ: funeral pile, pyre ಚಿತೆ; ಹೆಣವನ್ನು ಸುಡುವುದಕ್ಕೆ ಒಟ್ಟಿದ ಸೌದೆ ಮೊದಲಾದವುಗಳ ರಾಶಿ.

ಪದಗುಚ್ಛ
  1. funeral oration ಸ್ಮಶಾನಭಾಷಣ; ಮರಣ ಭಾಷಣ; ಶವಸಂಸ್ಕಾರದ ಸಂದರ್ಭದಲ್ಲಿ ಮಾಡುವ ಭಾಷಣ.
  2. funeral parlour (or (ಅಮೆರಿಕನ್‍ ಪ್ರಯೋಗ) home) ಸತ್ತವರನ್ನು ಹೂಳಲು ಯಾ ಸುಡಲು ಸಿದ್ಧಗೊಳಿಸುವ ಸಂಸ್ಥೆ, ಮನೆ.
  3. funeral urn ಹೆಣಬೂದಿ ಮಡಕೆ; ಚಿತಾಭಸ್ಮಪಾತ್ರೆ; ಶವಭಸ್ಮಕರಂಡ; ಭಸ್ಮದಾನಿ; ಹೆಣದ ಬೂದಿಯನ್ನು ಸಂಗ್ರಹಿಸಿಡುವ ಪಾತ್ರೆ.