See also 1frost
2frost ಹ್ರಾಸ್ಟ್‍
ಸಕರ್ಮಕ ಕ್ರಿಯಾಪದ
  1. ಹಿಮದಿಂದ ಯಾ ಹಿಮ ಹಳುಕುಗಳಿಂದ – ಮುಚ್ಚು, ಆವರಿಸು, ಹೊದಿಸು.
  2. (ಹಿಮದ ವಿಷಯದಲ್ಲಿ) (ಸಸ್ಯ ಮೊದಲಾದವನ್ನು) ಕೊರೆತದಿಂದ – ಸಾಯಿಸು, ಕೊಲ್ಲು, ಹಾನಿಗೊಳಿಸು: a freezing rain that badly frosted all the crops ಕೊರೆಯುವ ಶೀತದ ಮಳೆ ಹೆಪ್ಪುಗಟ್ಟಿ ಬೆಳೆಯನ್ನೆಲ್ಲ ಹಾಳುಮಾಡಿತು.
  3. (ಉತ್ಸಾಹ ಕೆಡಿಸುವ ವರ್ತನೆಯಿಂದ) ಉಲ್ಲಾಸಭಂಗಮಾಡು; ನಿರುತ್ಸಾಹಗೊಳಿಸು; ಚಿವುಟಿಹಾಕು: their social sympathies have been frosted in early life ಎಳೆತನದಲ್ಲೇ ಅವರ ಸಾಮಾಜಿಕ ಸಹಾನುಭೂತಿಗಳು ಚಿವುಟಿಹಾಕಲ್ಪಟ್ಟಿವೆ.
  4. (ಗಾಜಿಗೆ, ಲೋಹಕ್ಕೆ) ತರಕಲಾದ ಯಾ ದೊರಗು ಮೇಲ್ಮೈ ಕೊಡು.
  5. (ಕೇಕು ಮೊದಲಾದವನ್ನು) ಸಕ್ಕರೆ ಮೊದಲಾದವುಗಳ ಪುಡಿ ಉದುರಿಸಿ ಅಲಂಕರಿಸು.
  6. ಕೂದಲನ್ನು ಬೆಳ್ಳಗಾಗಿಸು.
  7. ಮೊಳೆ ಹೊಡೆದೋ ಬೇರೆ ವಿಧಾನದಿಂದಲೋ ಕುದುರೆಯ ಲಾಳಗಳನ್ನು ಜಾರದಂತೆ ಮಾಡು.
ಅಕರ್ಮಕ ಕ್ರಿಯಾಪದ

(ಹಿಮಹಳುಕುಗಳು) ಮುಚ್ಚು; ಕವಿ; ಹರಡು: the windshield was frosted over ಗಾಳಿತಡೆಯ ಮೇಲೆ ಹಿಮಹಳುಕುಗಳು ಮುಚ್ಚಿಕೊಂಡಿದ್ದುವು.