See also 2frost
1frost ಹ್ರಾಸ್ಟ್‍
ನಾಮವಾಚಕ
  1. ನೀರು ಗಡ್ಡೆಕಟ್ಟುವುದು, ಹೆಪ್ಪುಗಟ್ಟುವುದು.
  2. ನೀರಿನ ಘನೀಕರಣ ಬಿಂದುವಿಗಿಂತ ಕಡಮೆಯಿರುವ ತಾಪ: (ಬ್ರಿಟಿಷ್‍ ಪ್ರಯೋಗ) ten degrees of frost ಹತ್ತು ಡಿಗ್ರಿ ತಾಪ; ಹ್ಯಾರನ್‍ಹೀಟ್‍ಮಾನದಲ್ಲಿ $22^\circ\ {\rm F}$.
  3. ಹಿಮ; ಹಿಮಗಡ್ಡೆ ಕಟ್ಟಿದ ಸ್ಥಿತಿ; ಹೆಪ್ಪುಗಟ್ಟಿದ ಸ್ಥಿತಿ; ಘನತ್ವ: there is still some frost on the ground ನೆಲದ ಮೇಲೆ ಹಿಮ ಇನ್ನೂ ಗಡ್ಡೆಯಾಗಿಯೇ ಇದೆ.
  4. ಘನೀಭವಿಸಿದ ಇಬ್ಬನಿಯ ಆವಿ: windows covered with frost ಘನಹಿಮ ಕವಿದ ಕಿಟಕಿಗಳು.
  5. (ರೂಪಕವಾಗಿ) ಹಿಮಪಾತ; ಉಲ್ಲಾಸ ಕೆಡಿಸುವ, ನಿರುತ್ಸಾಹಗೊಳಿಸುವ, ನೀರಸವಾಗಿರುವ ಅನಿಷ್ಟಪ್ರಭಾವ: a frost of cares ಚಿಂತೆಗಳ ಹಿಮಪಾತ.
  6. (ಅಶಿಷ್ಟ) ಸೋಲು; ವೈಫಲ್ಯ; ವಿಫಲತೆ; ವ್ಯರ್ಥ ಪರಿಶ್ರಮ; ನಿರರ್ಥಕ ಪ್ರಯತ್ನ: this last book of his is a regular frost ಅವನ ಈ ಕಡೆಯ ಪುಸ್ತಕ ಕೇವಲ ವ್ಯರ್ಥ ಪರಿಶ್ರಮ.
ಪದಗುಚ್ಛ
  1. black frost ಕರಿಹಿಮ; ಬಿಳಿಯ ಘನ ಹಿಮವಿಲ್ಲದ. ಅತಿಶೈತ್ಯದಿಂದ ಸಸ್ಯಗಳನ್ನು ಕಪ್ಪಾಗಿಸುವ ಹಿಮ.
  2. hard frost ಕಡುಹಿಮ.
  3. Jack Frost (ಹಿಮಕ್ಕೆ ವ್ಯಕ್ತಿತ್ವ ಆರೋಪಿಸಿ) ಹೇಮಂತ; ಹಿಮಮೂರ್ತಿ.
  4. sharp frost ಕಡು ಹಿಮ.
  5. white frost ಹಳುಕುಹಿಮ; ಶೀತ ವಸ್ತುಗಳ ಮೇಲೆ ನೀರಾವಿ ಸೂಕ್ಷ್ಮ ಸ್ಫಟಿಕಾಕೃತಿಗಳಾಗಿ ಘನೀಭವಿಸಿದ ಬಿಳಿಯ ಘನಹಿಮ.