See also 1fox
2fox ಹಾಕ್ಸ್‍
ಸಕರ್ಮಕ ಕ್ರಿಯಾಪದ
  1. (ಪುಸ್ತಕದ ಹಾಳೆ, ಕೊರೆದ ಯಾ ಕೆತ್ತನೆಯ ಚಿತ್ರ, ಮೊದಲಾದವನ್ನು ಕಂದು ಚುಕ್ಕೆಗಳಿಂದ) ಬಣ್ಣಗೆಡಿಸು.
  2. (ಅಶಿಷ್ಟ) ಮೋಸಗೊಳಿಸು; ಮೋಸಮಾಡು; ಟೋಪಿಹಾಕು.
  3. ದಿಗ್ಭ್ರಾಂತಿ ಮಾಡು: some survivors were completely foxed by the tragedy ಜೀವದಿಂದುಳಿದ ಕೆಲವರು ಆ ದುರಂತದಿಂದ ಸಂಪೂರ್ಣವಾಗಿ ದಿಗ್ಭ್ರಾಂತಿಗೊಂಡಿದ್ದರು.
  4. ಬೂಟ್ಸಿನ ಮೇಲುಹೊದಿಕೆ ಭಾಗವನ್ನು ರಿಪೇರಿಮಾಡು. ಇನ್ನೊಂದು ಚರ್ಮದ ತುಂಡು ಸೇರಿಸಿ ಅಲಂಕರಿಸು.
ಅಕರ್ಮಕ ಕ್ರಿಯಾಪದ
  1. ನರಿಯಂತೆ ವರ್ತಿಸು; ಠಕ್ಕುಮಾಡು; ತಂತ್ರಿಯಾಗಿ ವರ್ತಿಸು; ಸೋಗುಹಾಕು; ಕಪಟಾಚರಣೆಮಾಡು; ನಟನೆಮಾಡು; ನಟಿಸು.
  2. (ಪುಸ್ತಕದ ಹಾಳೆ, ಚಿತ್ರ, ಮೊದಲಾದವು ಕಂದು ಚುಕ್ಕೆಗಳಿಂದ) ಬಣ್ಣಗೆಡು.