See also 1forge  3forge
2forge ಹೋರ್ಜ್‍
ಸಕರ್ಮಕ ಕ್ರಿಯಾಪದ
  1. (ಬೆಂಕಿಯಲ್ಲಿ ಕಾಯಿಸಿ, ಬಡಿದು) ಆಕಾರ ಕೊಡು; ರೂಪಿಸು; ತಯಾರಿಸು; ರಚನೆಮಾಡು.
  2. (ಕಥೆ, ಸುಳ್ಳು, ಮೊದಲಾದವನ್ನು) ಕಟ್ಟು; ಕಲ್ಪನೆಮಾಡು; ಹೊಸೆ.
  3. (ಹಣ ಮೊದಲಾದವನ್ನು) ಖೋಟಾ ತಯಾರಿಸು; ಸೃಷ್ಟಿಸು.
  4. (ಮುಖ್ಯವಾಗಿ ದಸ್ತೈವಜು, ಸಹಿ, ಮೊದಲಾದವನ್ನು) ಸೃಷ್ಟನೆ ಮಾಡು; ಸುಳ್ಳುಪತ್ರ ಸೃಷ್ಟಿಸು; ಖೋಟಾಪತ್ರ ತಯಾರಿಸು; ಕಳ್ಳರುಜುಮಾಡು.
  5. ರೂಪಿಸು; ಉಂಟುಮಾಡು; ಏರ್ಪಡಿಸು: attempting to forge an agreement between the different conflicting groups ಘರ್ಷಣೆಗೆ ಒಳಗಾದ ವಿಭಿನ್ನ ಗುಂಪುಗಳ ನಡುವೆ ಒಮ್ಮತವನ್ನುಂಟುಮಾಡಲು ಪ್ರಯತ್ನಿಸುತ್ತ.
ಅಕರ್ಮಕ ಕ್ರಿಯಾಪದ
  1. (ಕುದುರೆ ನಡೆಯುವಾಗ) ಮುಂಗಾಲಿನ ಲಾಳವನ್ನು ಹಿಂಗಾಲಿನ ಲಾಳದಿಂದ ಹೊಡೆದು ಶಬ್ದಮಾಡು.
  2. ಸುಳ್ಳುಪತ್ರ ಸೃಷ್ಟಿಸು; ಕಳ್ಳ ರುಜುಮಾಡು.
  3. ಕುಲುಮೆ ಕಾರಖಾನೆಯಲ್ಲಿ ಕೆಲಸಮಾಡು.