See also 1flow
2flow ಹ್ಲೋ
ನಾಮವಾಚಕ
  1. (ಹೊಳೆ, ಯೋಜನೆ, ಮಾತು, ಮೊದಲಾದವುಗಳ) ಹರಿವು; ಹರಿತ; ಓಟ; ಪ್ರವಾಹ.
  2. ಹರಿತದ ಮೊತ್ತ; ಪ್ರವಾಹ ಪ್ರಮಾಣ; ಹರಿಯುವ ನೀರಿನ ರಾಶಿ.
  3. (ವಸ್ತುವಿನ) ಗತಿ; ಹರಿಯುವ ರೀತಿ; ಓಟದ ಶೈಲಿ.
  4. ಹರಿಯುವ ದ್ರವ.
  5. (ಉಡುಪು, ರೂಪರೇಖೆ, ಮೊದಲಾದವುಗಳ ವಿಷಯದಲ್ಲಿ) ನಿರಿ; ನಿರಿಗೆ; ಅಲೆಯಲೆಯಾಗಿರುವುದು.
  6. ಪ್ರವಾಹ; ತುಂಬಿ ತುಳುಕುವುದು; ತುಂಬಿ ಹರಿಯುವುದು; ಸಮೃದ್ಧಿಯಾಗಿ ಒದಗಿಬರುವುದು.
  7. (ನೀರಿನ) ಉಬ್ಬರ; ಏರು; ಭರತ; ಬರುತ: ebb and flow ಉಬ್ಬರ, ಇಳಿತ (ಇಳಿತ, ಉಬ್ಬರ ಇಂಗ್ಲಿಷ್‍ ಕ್ರಮದಲ್ಲಿ)
  8. ರೂಪವಿಕಾರ; ರೂಪಹಾನಿ; ಆಕಾರವ್ಯತ್ಯಾಸ; ಒತ್ತಡಕ್ಕೆ ಸಿಕ್ಕಿ, ಒತ್ತಡದ ಪರಿಣಾಮವಾಗಿ ಘನವಸ್ತು ನಿಧಾನವಾಗಿ ರೂಪುಗೆಡುವುದು, ಆಕಾರ ಕಳೆದುಕೊಳ್ಳುವುದು.
ನುಡಿಗಟ್ಟು
  1. flow of soul ಸರಸಸಂಭಾಷಣೆ; ಸರಸಲ್ಲಾಪ.
  2. flow of spirits (ಸಹಜವಾದ) ಉಲ್ಲಾಸ; ಉತ್ಸಾಹ; ಗೆಲುವು.