See also 2flow
1flow ಹ್ಲೋ
ಅಕರ್ಮಕ ಕ್ರಿಯಾಪದ
  1. ಹರಿ; ಪ್ರವಹಿಸು; ಹೊನಲಿಡು.
  2. (ರಕ್ತ, ಹಣ, ವಿದ್ಯುತ್ಪ್ರವಾಹಗಳ ವಿಷಯದಲ್ಲಿ) ಹರಿ; ಪರಿಚಲಿಸು.
  3. (ವ್ಯಕ್ತಿಗಳ ಯಾ ವಸ್ತುಗಳ ವಿಷಯದಲ್ಲಿ) ಗುಂಪುಗುಂಪಾಗಿ ಯಾ ಸಲೀಸಾಗಿ – ಬರು ಯಾ ಹೋಗು.
  4. (ಭಾಷಣ, ಸಾಹಿತ್ಯಶೈಲಿ, ಮೊದಲಾದವುಗಳ ವಿಷಯದಲ್ಲಿ) ಲಲಿತವಾಗಿ ಹರಿ; ಸುಗಮವಾಗಿ ಯಾ ಸರಾಗವಾಗಿ – ಮುಂದುವರಿ. ಓಡು.
  5. (ಉಡುಪು ಕೂದಲರಾಶಿ, ಮೊದಲಾದವುಗಳ ವಿಷಯದಲ್ಲಿ) ಇಳಿ ಬೀಳು; ತೊಂಗು; ತೆರೆಗಳಂತೆ ಓಲಾಡು; ಅಲೆಯಲೆಯಾಗಿ ಇಳಿಬಿದ್ದಿರು.
  6. (ಗಣಿತ) (ಸಂಖ್ಯೆಗಳ ವಿಷಯದಲ್ಲಿ) ಹರಿ; ಅನಂತ ಸೂಕ್ಷ್ಮಪರಿಮಾಣಗಳಲ್ಲಿ ಏರುತ್ತಾ ಯಾ ಇಳಿಯುತ್ತಾ ಹೋಗು.
  7. ಉಕ್ಕಿ – ಹರಿ, ಬರು; ಹೊರಚಿಮ್ಮು; ಒರತೆಯಿಡು.
  8. (ರಕ್ತದ ವಿಷಯದಲ್ಲಿ) ಹರಿ; ಚೆಲ್ಲು; ಬಸಿ; ಸುರಿ; ಸ್ರವಿಸು.
  9. (ಯಾವುದೇ ವಸ್ತು ಯಾ ವಿಷಯದಿಂದ) ಆಗು; ಫಲವಾಗಿ ಬರು; ಪರಿಣಾಮವಾಗಿ ಬರು: wealth flows from industry ಕೈಗಾರಿಕೋದ್ಯಮದಿಂದ ಐಶ್ವರ್ಯ ಬರುತ್ತದೆ.
  10. ತುಂಬಿ ಹರಿ; ಪ್ರವಾಹವಾಗಿ ಬರು; ನೆರೆ ಬರು.
  11. (ವೈನಿನ ವಿಷಯದಲ್ಲಿ) ಧಾರಾಳವಾಗಿ ಹರಿ; ಕೈಹಿಡಿತವಿಲ್ಲದೆ, ಧಾರಾಳವಾಗಿ – ಹಂಚಿಕೆಯಾಗು, ಸರಬರಾಜಾಗು: wine flowed freely all evening ಮದ್ಯವು ಸಂಜೆಯೆಲ್ಲಾ ಧಾರಾಳವಾಗಿ ಹಂಚಿಕೆಯಾಯಿತು.
  12. (ಪ್ರಾಚೀನ ಪ್ರಯೋಗ) ಹರಿಯುತ್ತಿರು; ಯಥೇಚ್ಛವಾಗಿರು; ಸಮೃದ್ಧವಾಗಿ ಒದಗಿರು; ತುಂಬಿ ತುಳುಕು.
  13. (ಘನ ವಸ್ತುವಿನ ವಿಷಯದಲ್ಲಿ) ಒತ್ತಡದಿಂದ – ರೂಪ ಬದಲಾಗು, ರೂಪವೃತ್ಯಾಸಹೊಂದು, ಆಕಾರ ಬದಲಾಯಿಸು, ಆಕಾರದಲ್ಲಿ ಶಾಶ್ವತವಾಗಿ ಬದಲಾವಣೆಯಾಗು.
ನುಡಿಗಟ್ಟು
  1. land flowing with milk and honey ಹಾಲೂ ಜೇನೂ ತುಂಬಿ ಹರಿಯುವ ನಾಡು; ಸಿರಿ ತುಂಬಿ ತುಳುಕುವ ನಾಡು.
  2. swim with the flowing tide ಗೆಲ್ಲುವ ಪಕ್ಷವಹಿಸು; ಗೆದ್ದೆತ್ತಿನ ಬಾಲಹಿಡಿ.