See also 1flick
2flick ಹ್ಲಿಕ್‍
ಸಕರ್ಮಕ ಕ್ರಿಯಾಪದ
  1. (ಚಾವಟಿ, ಉಗುರು, ಮೊದಲಾದವುಗಳಿಂದ) ಛಟೀರ್‍ ಎಂದು ಹೊಡೆ; ಛಟ್‍ ಎಂದು ಹೊಡೆ.
  2. (ಛಟ್‍ ಎಂದು ಒದರಿ ಧೂಳು ಮೊದಲಾದವನ್ನು) ಕೊಡವಿಬಿಡು; ಝಾಡಿಸಿಬಿಡು.
  3. (ಚಾವಟಿಯನ್ನು ಥಟ್ಟನೆ) ಬೀಸು; ಬಡಿ.
  4. (ಕೈಚೌಕ ಮೊದಲಾದವನ್ನು) ಥಟ್ಟನೆ – ಕೊಡವು, ಒದರು, ಝಾಡಿಸು.
  5. ಥಟ್ಟನೆ ಹೊಡೆದು ಯಾ ನೂಕಿ (ಯಾವುದನ್ನಾದರೂ) ಚಲಿಸುವಂತೆ – ಮಾಡು, ಅಲುಗಿಸು, ಅಲ್ಲಾಡಿಸು.
ಅಕರ್ಮಕ ಕ್ರಿಯಾಪದ

ಥಟ್ಟನೆ – ಚಲಿಸು, ಹೋಗು.

ಪದಗುಚ್ಛ

flick through

  1. (ಇಸ್ಪೀಟೆಲೆ, ಪುಟ, ಮೊದಲಾದವುಗಳನ್ನು) ಬೆರಳುಗಳಿಂದ ಬೇಗ ಬೇಗ ತಿರುವು, ತಿರುವಿಹಾಕು, ಮಗುಚು.
  2. (ಯಾವುದರದೇ ಪುಟಗಳು ಮೊದಲಾದವನ್ನು ಸದ್ದಾಗುವಂತೆ ಬೆರಳುಗಳಿಂದ) ಸರಸರ – ತಿರುವು, ತಿರುವಿಹಾಕು, ಮಗುಚು.