See also 1finish
2finish ಹಿನಿಷ್‍
ನಾಮವಾಚಕ
  1. (ಮುಖ್ಯವಾಗಿ ನರಿಯ ಬೇಟೆಯ) ಕೊನೆಯ – ಹಂತ, ಮಜಲು; ಅಂತ್ಯ; ಪರ್ಯವಸಾನ: be in at the finish
    1. ನರಿಯ ಬೇಟೆ ಕೊನೆಯ ಮಜಲಿನಲ್ಲಿ ಹಾಜರಾಗಿರು.
    2. (ರೂಪಕವಾಗಿ) ಯಾವುದೇ ಕೆಲಸದ ಕೊನೆಯಲ್ಲಿ, ಮುಕ್ತಾಯದಲ್ಲಿ ಹಾಜರಾಗಿರು: he was not present at the start, but he was in there at the finish ಪ್ರಾರಂಭದಲ್ಲಿ ಅವನು ಇರಲಿಲ್ಲ, ಆದರೆ ಕೊನೆಯಲ್ಲಿ ಇದ್ದ.
  2. ಪೂರ್ಣತೆ ಕೊಡುವಂಥದು; ಪೂರ್ಣಕಾರಿ; ಪೂರ್ಣಗೊಳಿಸುವಂಥದ್ದು.
  3. ಮುಗಿದ ಯಾ ಪೂರ್ಣವಾದ ಸ್ಥಿತಿ.
  4. ಕೊನೆಯ ನಯಗೆಲಸ; ಮುಕ್ತಾಯದ ಒಪ್ಪ: the singer gave a fine finish to the song ಗಾಯಕ ಹಾಡಿಗೆ ಸುಂದರವಾದ ಮುಕ್ತಾಯದ ಒಪ್ಪವನ್ನು ಕೊಟ್ಟ.
  5. (ಮುಖ್ಯವಾಗಿ ಪೀಠೋಪಕರಣಗಳನ್ನು) ನಯಗೊಳಿಸುವ ರೀತಿ; ಮೆರಗು: mahogany finish ಮಹಾಗನಿ ಹಲಗೆ ನಯಮಾಡಿದಂತೆ ಕಾಣುವ ನಯಗೆಲಸ.
  6. ಕುದುರೆಪಂದ್ಯ ಮೊದಲಾದವು ಮುಗಿಯುವ ಗಡಿ.
ಪದಗುಚ್ಛ

fight to a finish ಒಂದು ಪಕ್ಷವು ಸೋಲುವವರೆಗೂ ಹೋರಾಡಿಬಿಡುವುದು; ಕಡೆಯ ತನಕ ಹೋರಾಟ.