See also 2finish
1finish ಹಿನಿಷ್‍
ಸಕರ್ಮಕ ಕ್ರಿಯಾಪದ
  1. ಕೊನೆಗೆ ತರು; ಕೊನೆಮುಟ್ಟಿಸು; ಕೊನೆಗಾಣಿಸು: finished speaking ಮಾತನ್ನು ಕೊನೆಮುಟ್ಟಿಸಿದ.
  2. ಕೊನೆಮುಟ್ಟು; ಕೊನೆ ತಲಪು: finished his days in poverty ಬಡತನದಲ್ಲಿ ಅವನ ಕೊನೆಯ ದಿನಗಳನ್ನು ಕಳೆದ.
  3. ಮುಗಿಸು; ಪೂರ್ತಿ ಮಾಡು; ಪೂರೈಸು; ಪೂರ್ಣಗೊಳಿಸು: finish one’s work ಒಬ್ಬನ ಕೆಲಸ ಮುಗಿಸು.
  4. (ಎಲ್ಲ ಯಾ ಉಳಿದಿರುವ ಆಹಾರವನ್ನು) ತಿಂದು ಮುಗಿಸಿಬಿಡು, ಪೂರೈಸಿಬಿಡು.
  5. (ಪುಸ್ತಕವನ್ನು ಪೂರ್ತಿಯಾಗಿ ಯಾ ಉಳಿದಿರುವ ಅದರ ಭಾಗವನ್ನು) ಓದಿ ಮುಗಿಸು.
  6. ಕೊಲ್ಲು; ತೀರಿಸಿಬಿಡು: they were resolved to finish me ನನ್ನನ್ನು ತೀರಿಸಿಬಿಡಬೇಕೆಂದು ಅವರು ದೃಢ ಸಂಕಲ್ಪ ಮಾಡಿದ್ದರು.
  7. (ಮುಖ್ಯವಾಗಿ ಆಡುಮಾತು) ಸೋಲಿಸಿ ಸುಸ್ತುಮಾಡಿಬಿಡು; ನಿಸ್ಸಹಾಯಕಸ್ಥಿತಿಗೆ ತಂದುಬಿಡು: he was completely finished by the exertion ಶ್ರಮ ಅವನನ್ನು ತೀರ ಸುಸ್ತು ಮಾಡಿಬಿಟ್ಟಿತು.
  8. ಒಪ್ಪಗೊಳಿಸು; ಓರಣಿಸು; ಪರಿಷ್ಕರಿಸು; ಸಂಸ್ಕರಿಸು; ಓರೆಕೋರೆಗಳನ್ನು ತಿದ್ದಿ ಪರಿಪೂರ್ಣಗೊಳಿಸು: finished manners ಸುಸಂಸ್ಕೃತ ನಡವಳಿಕೆ.
  9. ವಿದ್ಯಾಭ್ಯಾಸ – ಪೂರ್ತಿಗೊಳಿಸು, ಮುಗಿಸು: where were you finished ನಿನ್ನ ವಿದ್ಯಾಭ್ಯಾಸ ಮುಗಿದದ್ದು ಎಲ್ಲಿ?
  10. (ಮರಗೆಲಸ, ಬಟ್ಟೆ, ಮೊದಲಾದವುಗಳ) ತಯಾರಿಕೆಯನ್ನು ಮೇಲ್ಮೈ ಸಂಸ್ಕರಣದಿಂದ ಪೂರೈಸು, ಪೂರ್ತಿಗೊಳಿಸು, ಕೊನೆಯ ಒಪ್ಪಮಾಡು.
ಅಕರ್ಮಕ ಕ್ರಿಯಾಪದ
  1. ಕೊನೆಗೆ ಬರು; ಕೊನೆ ಸೇರು; ಕೊನೆಮುಟ್ಟು; ಅಂತ್ಯ ತಲುಪು; ಕೊನೆಗಾಣು; ಮುಗಿ; ಬಿಳಿಯು; ಮುಗಿದುಹೋಗು; ಮುಕ್ತಾಯವಾಗು; ಪೂರೈಸು: he wishes his days may finish before such a mishap ಅಂತಹ ಅಪಘಾತಕ್ಕೆ ಮುಂಚೆಯೇ ತನ್ನ ದಿನಗಳು ಮುಗಿದುಹೋಗಲೆಂದು ಅವನು ಬಯಸುತ್ತಾನೆ.
  2. ಮಾಡಿ ಮುಗಿಸು: to-night I shall finish with Ashoka’s reign ಇಂದು ರಾತ್ರಿ ಅಶೋಕನ ರಾಜ್ಯಭಾರವನ್ನು (ಬರೆದು) ಮುಗಿಸುತ್ತೇನೆ.
  3. (ಒಂದು ವಿಷಯದಲ್ಲಿ ಯಾ ಒಂದನ್ನು ಮಾಡುವುದರಲ್ಲಿ) ಮುಗಿ; ಕೊನೆಗೊಳ್ಳು: partnerships often finish in quarrels ಪಾಲುಗಾರಿಕೆಗಳು ಬಹುವೇಳೆ ಜಗಳದಲ್ಲಿ ಮುಗಿಯುತ್ತವೆ.
  4. (ಕುದುರೆ ಪಂದ್ಯ ಮೊದಲಾದವು) ಕೊನೆಮುಟ್ಟು.
ಪದಗುಚ್ಛ
  1. finish doing ಮಾಡಿ ಮುಗಿಸು.
  2. finishing stroke ಕೊನೆಯೇಟು; ಮುಗಿಸುವ ಹೊಡೆತ.
  3. finish off
    1. ಮುಗಿಸಿಬಿಡು; ಮುಕ್ತಾಯ ಕೊಡು.
    2. ಮುಗಿಸಿಬಿಡು; ಕೊಲ್ಲು.
    3. ತಿಂದುಮುಗಿಸು; ಪೂರ್ತಿ ತಿಂದುಬಿಡು.
    4. ಓದಿ ಮುಗಿಸಿಬಿಡು.
    5. ಪೂರ್ತಿ ಸುಸ್ತು ಮಾಡು.
  4. finish up ಕೊನೆಮುಟ್ಟಿಸು; ಮುಕ್ತಾಯಮಾಡು; ಮುಗಿಸು.
  5. finish with
    1. ಸಂಪರ್ಕ – ಮುಗಿದಿರು, ಇಲ್ಲದಿರು: ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸು: have you finished with that dictionary? ನಿನ್ನ ಆ ನಿಘಂಟು ಕೆಲಸ ನಿಲ್ಲಿಸಿಬಿಟ್ಟೆಯಾ?
    2. ಕೊನೆಯಲ್ಲಿ ಪಡೆ: we had excellent dinner, with a glass of old brandy to finish with ನಾವು ಭರ್ಜರಿ ಊಟ ಮಾಡಿದೆವು, ಕೊನೆಯಲ್ಲಿ ಹಳೆಯ ಬ್ರಾಂದಿ ಸೇವಿಸಿದೆವು.
  6. finish up with ಕೊನೆಯಲ್ಲಿ ಪಡೆ.