See also 1finesse
2finesse ಹಿನೆಸ್‍
ಸಕರ್ಮಕ ಕ್ರಿಯಾಪದ
  1. ಯುಕ್ತಿ, ತಂತ್ರ, ಯಾ ಉಪಾಯದಿಂದ – ಮರಳುಮಾಡು, ಪುಸಲಾಯಿಸು, ಒಲಿಸು, ನಡೆಸು, ಸಾಧಿಸು: the man who finessed the entry of the American troops ಅಮೆರಿಕನ್‍ ಸೈನ್ಯವನ್ನು ಯುಕ್ತಿಯಿಂದ ಒಳಕ್ಕೆ ನುಗ್ಗಿಸಿದ ವ್ಯಕ್ತಿ.
  2. (ಇಸ್ಪೀಟಾಟ) ದೊಡ್ಡ ಎಲೆ ಉಳಿಸಿಕೊಂಡು ಚಿಕ್ಕ ಎಲೆ ಇಳಿಸು.
  3. ಉಪಾಯದಿಂದ, ತಂತ್ರದಿಂದ – ತಪ್ಪಿಸಿಕೊ ಯಾ ಮೋಸಮಾಡು.
ಅಕರ್ಮಕ ಕ್ರಿಯಾಪದ
  1. ಯುಕ್ತಿ, ತಂತ್ರ, ಉಪಾಯ – ಮಾಡು, ಹೂಡು, ನಡೆಸು, ಬಳಸು.
  2. (ಇಸ್ಪೀಟಾಟ) ದೊಡ್ಡ ಎಲೆಯನ್ನು ಉಳಿಸಿಕೊಂಡು ಕಡಮೆ ಎಲೆಯಿಂದ ಪಟ್ಟನ್ನು ಗೆಲ್ಲು.