See also 1filter
2filter ಹಿಲ್ಟರ್‍
ಸಕರ್ಮಕ ಕ್ರಿಯಾಪದ
  1. ಸೋಸು; ಗಾಳಿಸು; ಶೋಧಿಸು; (ದ್ರವವನ್ನು ಯಾ ಅನಿಲವನ್ನು) ಶೋಧಕದ ಮೂಲಕ ಕಳುಹಿಸಿ ಘನಪದಾರ್ಥದಿಂದ ಬೇರ್ಪಡಿಸು.
  2. (ಶೋಧಕದ ವಿಷಯದಲ್ಲಿ) ಶೋಧಿಸು; ಸೋಸು; (ದ್ರವ ಯಾ ಅನಿಲವನ್ನು) ಘನ ಪದಾರ್ಥದಿಂದ ಬೇರ್ಪಡಿಸು.
  3. (ವಿದ್ಯುತ್‍ ಸಂಕೇತ ಮೊದಲಾದವುಗಳನ್ನು) ಕ್ಷೀಣಗೊಳಿಸುವ ಮಂಡಲದ ಮೂಲಕ ಹಾಯಿಸು.
ಅಕರ್ಮಕ ಕ್ರಿಯಾಪದ
  1. (ಸಮಾಚಾರ ಮೊದಲಾದವುಗಳ ವಿಷಯದಲ್ಲಿ) ಹೊರ ಬೀಳು; ಹೊರಬರು; ಹಾದುಬರು.
  2. ಕೂಡುರಸ್ತೆಯ ಬಳಿ ಬೇರೊಂದು ವಾಹನಮಾರ್ಗ ಹಿಡಿ, ಸೇರು.
  3. ಶೋಧಿಸಿ, ಸೋಸಿ – ಬರು; ಬಸಿದುಬರು: the liquids filtered from these solutions ಈ ದ್ರಾವಣಗಳಿಂದ ಬಸಿದುಬಂದ ದ್ರವಗಳು.
ಪದಗುಚ್ಛ

filter out ಸೋಸುವುದರ ಮೂಲಕ ಯಾ ಸೋಸಿದಂತೆ – ಬೇರ್ಪಡಿಸು ಯಾ ತಡೆ.