See also 2filter
1filter ಹಿಲ್ಟರ್‍
ನಾಮವಾಚಕ

ಹಿಲ್ಟರು; ಶೋಧಕ:

  1. ದ್ರವದಲ್ಲಿ ಯಾ ಅನಿಲದಲ್ಲಿ ಇರಬಹುದಾದ ಘನ ಪದಾರ್ಥವನ್ನು ದ್ರವ ಯಾ ಅನಿಲದಿಂದ ಬೇರ್ಪಡಿಸಲು ಉಪಯೋಗಿಸುವ ಯಾವುದೇ ಸಾಧನ.
  2. (ಛಾಯಾಚಿತ್ರಣ) ನಿರ್ದಿಷ್ಟ ಬಣ್ಣದ ಯಾ ಎಲ್ಲಾ ಬಣ್ಣದ ರಶ್ಮಿಗಳನ್ನು ಹೀರುವ ಯಾ ಕ್ಷ – ಕಿರಣಗಳನ್ನು ಹೀರುವ ತೆರೆ.
  3. (ವಿದ್ಯುದ್ವಿಜ್ಞಾನ) ನಿರ್ದಿಷ್ಟ ಆವರ್ತನ ಶ್ರೇಣಿಯ ಹೊರಗಿನ ಎಲ್ಲಾ ಸಂಕೇತಗಳನ್ನೂ ಕ್ಷೀಣಗೊಳಿಸುವ ಮಂಡಲ.
  4. (ವಾಹನ ಸಂದಣಿಯನ್ನು ತಗ್ಗಿಸಲು) ರಸ್ತೆಗಳ ಸೇರುವೆಯಲ್ಲಿ ಪ್ರಧಾನ ದಿಕ್ಕಿನ ಸಂಚಾರವನ್ನು ತಡೆಹಿಡಿದು, ಇತರ ವಾಹನ ಸಂಚರವನ್ನು ಒಂದು ದಿಕ್ಕಿಗೆ ಬಿಡುವಂತೆ ತೋರಿಸುವ, ಹಸಿರು ಬಣ್ಣದ ಗುರುತಿರುವ, ಟ್ರ್ಯಾಹಿಕ್‍ ಸಿಗ್ನಲ್ಲು, ಸಂಚಾರ ಸಂಕೇತ.