See also 1figure
2figure ಹಿಗರ್‍
ಸಕರ್ಮಕ ಕ್ರಿಯಾಪದ
  1. ರೇಖಿಸು; ಚಿತ್ರಿಸು; ರೂಪಿಸು.
  2. ಮನಸ್ಸಿನಲ್ಲಿ – ಚಿತ್ರಿಸಿಕೊ, ಭಾವಿಸು: I figure it like this ಇದು ನನ್ನ – ಎಣಿಕೆ, ಊಹೆ, ಕಲ್ಪನೆ.
  3. (ಯಾವುದೇ ಒಂದಕ್ಕೆ) ಲಕ್ಷಣ, ಸಂಕೇತ, ಭೂಷಣ – ಆಗಿರು: his personality figuring the council of the city ಅವನ ವ್ಯಕ್ತಿತ್ವ ನಗರಸಭೆಗೆ ಭೂಷಣವಾಗಿದ್ದು.
  4. ಚಿತ್ತಾರಮಾಡು; ಚಿತ್ರರಚನೆಗಳಿಂದ ಅಲಂಕರಿಸು.
  5. (ಸಂಗೀತ) ಅಲಂಕಾರಗಳಿಂದ ಸುಂದರಗೊಳಿಸು.
  6. ಅಂಕಿಗಳಿಂದ ಗುರುತುಮಾಡು; ಅಂಕಿ ಹಾಕು.
  7. ಲೆಕ್ಕಮಾಡು; ಲೆಕ್ಕಾಚಾರಹಾಕು.
  8. ಬೆಲೆ ಗುರುತು ಮಾಡು; ಬೆಲೆ ನಮೂದಿಸು.
  9. (ಅಮೆರಿಕನ್‍ ಪ್ರಯೋಗ) ತಿಳಿ; ಅರಿ; ಗ್ರಹಿಸು.
  10. (ಅಮೆರಿಕನ್‍ ಪ್ರಯೋಗ) ದೃಢಪಡಿಸು; ಖಚಿತಪಡಿಸು; ಖಾತರಿಮಾಡು.
ಅಕರ್ಮಕ ಕ್ರಿಯಾಪದ
  1. ಕಾಣು; ಕಾಣಿಸಿಕೊ; ತೋರು; ತೋರಿಸಿಕೊ; ಪ್ರಕಟವಾಗು.
  2. ಸುವ್ಯಕ್ತವಾಗಿರು; ಎದ್ದುಕಾಣು; ಪ್ರಧಾನವಾಗಿ ಯಾ ಪ್ರಮುಖವಾಗಿ ಕಾಣಿಸು: his name figures prominently in my report ನನ್ನ ವರದಿಯಲ್ಲಿ ಅವನ ಹೆಸರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ.
  3. ಲೆಕ್ಕಾಚಾರಮಾಡು; ಲೆಕ್ಕಹಾಕು.
  4. (ಅಮೆರಿಕನ್‍ ಪ್ರಯೋಗ, ಆಡುಮಾತು) ಯುಕ್ತಿಯುಕ್ತವಾಗಿರು; ಸಂಭವನೀಯವಾಗಿರು; ನಿರೀಕ್ಷಿತವಾಗಿರು; ನಿರೀಕ್ಷಣೆಗೆ ಅನುಸಾರವಾಗಿ ಯಾ ಅರ್ಥವಾಗುವಂತೆ ಇರು: that figures ಅದು ಯುಕ್ತಿಯುಕ್ತವಾಗಿದೆ; ನಿರೀಕ್ಷಿತವಾಗಿದೆ; ಅರ್ಥವಾಗುವಂತಿದೆ.
ಪದಗುಚ್ಛ
  1. figured satin ಚಿತ್ತಾರದ ಸ್ಯಾಟಿನ್ನು; ಚಿತ್ರ ನೆಯ್ದ ಸ್ಯಾಟಿನ್‍ಬಟ್ಟೆ.
  2. figure on (ಅಮೆರಿಕನ್‍ ಪ್ರಯೋಗ)
    1. ಪರಿಗಣಿಸು; ಲೆಕ್ಕಕ್ಕೆ ತೆಗೆದುಕೊ.
    2. ನಿರೀಕ್ಷಿಸು; ಎಣಿಸು; ನೆಚ್ಚಿಕೊ: we always figure on supplying more lenses in July and August than in all the rest of the year ಜುಲೈ ಮತ್ತು ಆಗಸ್ಟ್‍ ತಿಂಗಳುಗಳಲ್ಲಿ ನಾವು ಒದಗಿಸುವ ಮಸೂರಗಳ ಪ್ರಮಾಣ ಬಾಕಿ ಇಡೀ ವರ್ಷದ ಪ್ರಮಾಣಕ್ಕಿಂತ ಯಾವಾಗಲೂ ಹೆಚ್ಚಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
  3. figure out
    1. (ಅಮೆರಿಕನ್‍ ಪ್ರಯೋಗ) ಬೆಲೆ ಯಾ ಮೊತ್ತವನ್ನು ಸಂಖ್ಯೆಯಲ್ಲಿ ಹೇಳು: it figures out at Rs.45 ಅದರ ಒಟ್ಟು ಮೊತ್ತ 45 ರೂ. ಆಗುತ್ತದೆ.
    2. ಗಣಿತದಿಂದ ಯಾ ತರ್ಕದಿಂದ ಲೆಕ್ಕಹಾಕು; ಲೆಕ್ಕಚಾರಮಾಡು.
    3. (ಅಮೆರಿಕನ್‍ ಪ್ರಯೋಗ) ತಿಳಿದುಕೊ; ಗ್ರಹಿಸು.
  4. figure up ಕೂಡು; ಮೊತ್ತ ಕಂಡು ಹಿಡಿ.