See also 2figure
1figure ಹಿಗರ್‍
ನಾಮವಾಚಕ
  1. ಹೊರರೂಪ; ಬಾಹ್ಯಾಕೃತಿ; ಆಕಾರ; ಆಕೃತಿ.
  2. (ಜ್ಯಾಮಿತಿ) (ತ್ರಿಕೋಣ, ವೃತ್ತ, ಮೊದಲಾದ) ಆಕೃತಿ; ರೇಖೆ ಯಾ ರೇಖೆಗಳಿಂದ ಆವೃತವಾದ ದ್ವಿತಲ ಯಾ ಸಮತಲ ಪ್ರದೇಶ, ಇಲ್ಲವೆ ತಲ ಯಾ ತಲಗಳಿಂದ ಆವೃತವಾದ (ಗೋಳ, ಶಂಕು, ಮೊದಲಾದ) ಘನಪ್ರದೇಶ.
  3. ದೇಹಾಕೃತಿ; ಶರೀರದ ಆಕಾರ; ಮೈಕಟ್ಟು: he has a well-developed figure ಅವನಿಗೆ ಒಳ್ಳೆಯ ಮೈಕಟ್ಟು ಇದೆ.
  4. ಮನುಷ್ಯಾಕೃತಿ; ಕಣ್ಣಿಗೆ ಕಾಣುವಂಥ ವ್ಯಕ್ತಿ: saw a figure leaning against the door ಬಾಗಿಲಿಗೆ ಒರಗಿದ ಒಂದು ಮನುಷ್ಯಾಕೃತಿಯನ್ನು ಕಂಡೆ.
  5. (ನಾವು ಕಾಣುವಂಥ, ಮನಸ್ಸಿನಲ್ಲಿ ರೂಪಿಸಿಕೊಳ್ಳಬಲ್ಲ) ವ್ಯಕ್ತಿ: the most terrible figure in our history ನಮ್ಮ ಇತಿಹಾಸದಲ್ಲೇ ಅತ್ಯಂತ ಭಯಂಕರ ವ್ಯಕ್ತಿ.
  6. ಭಾವ; ಚಿತ್ರ; ವ್ಯಕ್ತಿ ಯಾ ವಸ್ತು ಉಂಟುಮಾಡುವ ಪ್ರಭಾವ ಯಾ ನೀಡುವ ಚಿತ್ರ: she was a figure of distress ಅವಳು ವ್ಯಥೆಯ ಚಿತ್ರವಾಗಿದ್ದಳು; ಅವಳ ಚಹರೆ ಮತ್ತು ಭಾವ ವ್ಯಥೆಯನ್ನು ಸೂಚಿಸುತ್ತಿದ್ದವು.
  7. ಬಿಂಬ; ಪ್ರತಿಬಿಂಬ; ಮರುಪಡಿ; ಪ್ರತಿಕೃತಿ.
  8. ಚಿತ್ರಾಕೃತಿ; ಶಿಲ್ಪಾಕೃತಿ; ಚಿತ್ರ; ಪ್ರತಿಮೆ; ಶಿಲ್ಪ; ಮೂರ್ತಿ; ಚಿತ್ರದಲ್ಲಿ, ಶಿಲ್ಪದಲ್ಲಿ ರೂಪಿಸಿದ ಮನುಷ್ಯಾಕೃತಿ.
  9. ಸಂಕೇತ; ಪ್ರತೀಕ: the dove is a figure of peace ಪಾರಿವಾಳ ಶಾಂತಿಯ ಸಂಕೇತವಾಗಿದೆ.
  10. ಜಾತಿರೂಪ; ಪ್ರತಿರೂಪ; ಅಚ್ಚು; ಮಾದರಿ; ನಮೂನೆ.
  11. ಉಪಮೆ.
  12. ರೇಖಾಕೃತಿ; ನಿದರ್ಶಕ ಚಿತ್ರ; ವಿವರಣ ಚಿತ್ರ (ಪ್ಲೇಟ್‍ ಯಾ ಚಿತ್ರಪಟ ಅಲ್ಲದ್ದು).
  13. ಜಾತಕ; ಕುಂಡಲಿ; ರೇಖಾಲಂಕಾರ; ಅಲಂಕಾರದ ರಚನೆ.
  14. ನೃತ್ಯನಿರೂಪಣೆಯ ಚಲನೆ.
  15. (ಸ್ಕೇಟಿಂಗ್‍ ಆಟದಲ್ಲಿ ಕೇಂದ್ರದಿಂದ) ಪ್ರಾರಂಭವಾಗಿ ಅಲ್ಲೇ ಕೊನೆಮುಟ್ಟುವ ಬಗೆಬಗೆಯ ಚಲನವಲನಗಳು.
  16. ಅಂಕಿ; ಅಂಕ; ಮುಖ್ಯವಾಗಿ ಅರಬ್ಬಿ ಪದ್ಧತಿಯಲ್ಲಿ ಬಳಸುವ ಹತ್ತು ಅಂಕಿಗಳಲ್ಲಿ ಒಂದು: double figures ಒಂಬತ್ತರ ಮೇಲೆ ಮತ್ತು ನೂರರ ಕೆಳಗಿನ ಸಂಖ್ಯೆ. three figures 100 ರಿಂದ 999ರ ವರೆಗಿನ ಯಾವುದೇ ಸಂಖ್ಯೆ. four figures 1,000ದಿಂದ 9,999ರ ವರೆಗಿನ ಯಾವುದೇ ಸಂಖ್ಯೆ.
  17. (ಬಹುವಚನದಲ್ಲಿ) ಗಣಿತದ ಲೆಕ್ಕಾಚಾರ.
  18. (ರೂಪಕ, ಅತಿಶಯೋಕ್ತಿ, ಮೊದಲಾದ) ಅಲಂಕಾರ.
  19. (ವ್ಯಾಕರಣ) ವಾಕ್ಯರಚನೆಯಲ್ಲಿ ಸಾಮಾನ್ಯ ನಿಯಮಗಳಿಗೆ ಅಪವಾದವಾದ ಪ್ರಯೋಗ, ಉದಾಹರಣೆಗೆ ಅಧ್ಯಾಹಾರ.
  20. (ತರ್ಕಶಾಸ್ತ್ರ) ಮಧ್ಯಪದದ ಸ್ಥಾನವನ್ನವಲಂಬಿಸಿ ಬದಲಾಗುವ ‘ಸಿಲಜಿಸಂ’ ರೂಪಗಳಲ್ಲೊಂದು.
  21. (ಸಂಗೀತ) ಅನೇಕ ಸ್ವರಗಳು ಅನುಕ್ರಮವಾಗಿ ಹತ್ತಿರ ಹತ್ತಿರದಲ್ಲೇ ಬರುವುದರಿಂದ ಒಂದೇ ಎಂಬ ಭಾವನೆಯನ್ನುಂಟುಮಾಡುವ ಸ್ವರಶ್ರೇಣಿ.
  22. ಅಲಂಕಾರ; ರಾಗ ವಿಸ್ತರಣೆಗೆ ಅನುವಾಗುವ ಸಂಕ್ಷಿಪ್ತ ಸ್ವರ ಯಾ ತಾಳ, ಸೂತ್ರ.
ಪದಗುಚ್ಛ

public figure ಸಾರ್ವಜನಿಕ ವ್ಯಕ್ತಿ; ಪ್ರಸಿದ್ಧ ವ್ಯಕ್ತಿ; ಬಹುಜನರಿಗೆ ತಿಳಿದಿರುವ ವ್ಯಕ್ತಿ.

ನುಡಿಗಟ್ಟು
  1. cut a poor figure ಎಲ್ಲರ ಕಣ್ಣಿಗೆ ನಿಕೃಷ್ಟವಾಗಿ ತೋರು; ಎಲ್ಲರಿಂದಲೂ ಅವಲಕ್ಷಣ ಅನಿಸಿಕೊ.
  2. figure of fun ವಿಕಟಾಕೃತಿ; ವಿಕಟ ವ್ಯಕ್ತಿ; ಹಾಸ್ಯಾಸ್ಪದ ವ್ಯಕ್ತಿ.
  3. make (or cut) a brilliant figure ಉಜ್ಜ್ವಲ ವ್ಯಕ್ತಿಯಾಗಿ ತೋರು; ಎಲ್ಲರ ಗಮನ ಸೆಳೆಯುವಂತಾಗು.
  4. keep one’s figure ಮೈಯನ್ನು ದಪ್ಪವಾಗಿ ಬೆಳೆಸದಿರು; ದಪ್ಪವಾಗಿ ಬೆಳೆಯದಿರು.
  5. person of figure ಗಣ್ಯ ವ್ಯಕ್ತಿ.