See also 1fight
2fight ಹೈಟ್‍
ನಾಮವಾಚಕ
  1. ಹೋರಾಡುವುದು; ಕಾಳಗ ನಡೆಸುವುದು; ಕದನ ನಡೆಸುವುದು.
  2. ಹೋರಾಟ; ಕಾಳಗ; ಕದನ.
  3. ಹೋರಾಟ; ಹೊಡೆದಾಟ; ಬಡಿದಾಟ; ಇಬ್ಬರು ಯಾ ಅದಕ್ಕಿಂತ ಹೆಚ್ಚು ಜನರ, ಪ್ರಾಣಿಗಳ ಯಾ ಗುಂಪುಗಳ ನಡುವೆ ನಡೆಯುವ, ಮುಖ್ಯವಾಗಿ ಪೂರ್ವ ನಿಯೋಜಿತವಲ್ಲದ, ಹೋರಾಟ.
  4. (ರೂಪಕವಾಗಿ) ಕಲಹ; ಜಗಳ; ಘರ್ಷಣೆ; ವ್ಯಾಜ್ಯ.
  5. ಹೋರಾಡುವ ಅಪೇಕ್ಷೆ, ಶಕ್ತಿ ಯಾ ಕೆಚ್ಚು: has fight in him yet ಅವನಲ್ಲಿ ಇನ್ನೂ ಹೋರಾಡುವ ಕೆಚ್ಚು ಇದೆ.
  6. ಮುಷ್ಟಿಯುದ್ಧ ಸ್ಪರ್ಧೆ; ಬಾಕ್ಸಿಂಗ್‍ ಸ್ಪರ್ಧೆ.
ಪದಗುಚ್ಛ
  1. give a fight ಹೋರಾಡು.
  2. make a fight of it ಹೋರಾಟ ನಡೆಸು; ಎದುರಿಸು.
  3. put up a fight = ಪದಗುಚ್ಛ \((1)\).
  4. running fight ಒಂದು ಪಕ್ಷ ಪಲಾಯನ ಮಾಡಿದಾಗ ಇನ್ನೊಂದು ಪಕ್ಷ ಅದನ್ನು ಬೆನ್ನಟ್ಟಿಹೋಗುತ್ತ ನಡೆಸುವ ಕದನ.
  5. sham fight (ಅಭ್ಯಾಸಕ್ಕಾಗಿ, ಪ್ರದರ್ಶನಕ್ಕಾಗಿ ನಡೆಸುವ) ಹುಸಿಕಾಳಗ.
  6. show fight ಸುಲಭವಾಗಿ ಜಗ್ಗದೆ ಎದುರಿಸು.
  7. stand-up fight ಎದುರು ನಿಂತು, ವಿಧ್ಯುಕ್ತವಾಗಿ ಮಾಡುವ ಯುದ್ಧ.
  8. valiant in fight ಹೋರಾಟದಲ್ಲಿ ಶೂರ.