See also 2fight
1fight ಹೈಟ್‍
ಕ್ರಿಯಾಪದ
(ವರ್ತಮಾನ ಕೃದಂತ fighting, ಭೂತರೂಪ ಮತ್ತು ಭೂತಕೃದಂತ fought.)
ಸಕರ್ಮಕ ಕ್ರಿಯಾಪದ
  1. (ಎದುರಾಳಿಯೊಡನೆ, ಪ್ರತಿಪಕ್ಷದವನೊಡನೆ) ಜಗಳ ಮಾಡು; ವ್ಯಾಜ್ಯ ಮಾಡು.
  2. ಮೊಕದ್ದಮೆ ನಡೆಸು.
  3. (ತನಗೆ ಬೇಕಾದ್ದನ್ನು) ಹೋರಾಡಿ ಪಡೆ, ಗಳಿಸು.
  4. (ರಣರಂಗದಲ್ಲಿ, ದ್ವಂದ್ವಯುದ್ಧದಲ್ಲಿ ಯಾ ಮುಷ್ಟಾಮುಷ್ಟಿಯಲ್ಲಿ) ಸೆಣಸು; ಹೋರಾಡು.
  5. (ಹುಂಜಗಳನ್ನು, ನಾಯಿಗಳನ್ನು) ಕಾದಾಟಕ್ಕೆ ಬಿಡು; ಕಾಳಗಕ್ಕೆ ಇಳಿಸು; ಕಾದಾಡುವಂತೆ ಮಾಡು.
  6. (ಸೈನ್ಯ, ಹಡಗು – ಇವನ್ನು) ಯುದ್ಧದಲ್ಲಿ ನಡೆಸು, ನಿರ್ವಹಿಸು.
  7. (ರೋಗ, ಬೆಂಕಿ, ಭಯ, ಮೊದಲಾದವನ್ನು) ಹತ್ತಿಕ್ಕಲು, ಅಡಗಿಸಲು – ಶ್ರಮಿಸು: fight terrorism ಭಯೋತ್ಪಾದನೆಯನ್ನು ಅಡಗಿಸಲು ಶ್ರಮಿಸು.
ಅಕರ್ಮಕ ಕ್ರಿಯಾಪದ
  1. ಯುದ್ಧ ಮಾಡು.
  2. ಹೋರಾಡು; ಕಾದು; ಕಾದಾಡು; ಸೆಣಸು: he fought against despair ಅವನು ನಿರಾಶೆಯ ವಿರುದ್ಧ ಹೋರಾಡಿದ.
ಪದಗುಚ್ಛ
  1. fight back ಎದುರಿಸು; ಹೋರಾಡು; ತಡೆಗಟ್ಟಲು ಪ್ರಯತ್ನಿಸು.
  2. fight for ಒಬ್ಬನ ಪರವಾಗಿ, ಒಂದು ವಸ್ತುವನ್ನು ಪಡೆಯಲು – ಹೋರಾಡು.
  3. fight (it) out (ವ್ಯಾಜ್ಯ ಮೊದಲಾದವನ್ನು) ಕಾದಾಡಿ ಬಗೆಹರಿಸು; ತೀರ್ಮಾನವಾಗುವವರೆಗೂ ಕಾದಾಡು.
  4. fight off ಕಾದಾಡಿ ಓಡಿಸು; ಪ್ರಯಾಸದಿಂದ ಹೊಡೆದೋಡಿಸು, ಹಿಂದಕ್ಕೆ ತಳ್ಳು, ಹಿಮ್ಮೆಟ್ಟಿಸು.
ನುಡಿಗಟ್ಟು
  1. fight back (or down) (ಒಬ್ಬನ ಭಾವನೆಗಳನ್ನು) ಅಡಗಿಸು; ದಮನಮಾಡು; ನಿಗ್ರಹಿಸು.
  2. fight shy of (ಒಬ್ಬ ವ್ಯಕ್ತಿ, ಒಂದು ಕಾರ್ಯ, ಮೊದಲಾದವುಗಳಿಂದ) ದೂರವಾಗಿರು; ದೂರನಿಲ್ಲು; ಹಿಂಜರಿ; ಅಳುಕು; ಹಿಂದೇಟು ಹೊಡೆ.