1 fence
ನಾಮವಾಚಕ
(ಪ್ರಾಚೀನ ಪ್ರಯೋಗ) ಕತ್ತಿವರಿಸೆ; ಖಡ್ಗವಿದ್ಯೆ.
(ಪ್ರಾಚೀನ ಪ್ರಯೋಗ) ಕೊತ್ತಳ; ಬುರುಜು.
(ಪ್ರಾಚೀನ ಪ್ರಯೋಗ) ರಕ್ಷಣಾವಿಧಾನ.
(ಹೊಲ ಮೊದಲಾದವಕ್ಕೆ ನುಗ್ಗಲಾಗದಂತೆ ಹಾಕುವ) ಬೇಲಿ, ಸುತ್ತುಗೋಡೆ, ಕಟಕಟೆ, ಆವರಣ, ಮೊದಲಾದವು.
(ಅನೇಕ ಯಂತ್ರಗಳಲ್ಲಿ) ತಡೆ; ಕಾಪು ನಿಯಂತ್ರಕ.
ಕಳವುಮಾಲನ್ನು ತೆಗೆದುಕೊಳ್ಳುವವನು ಯಾ ತೆಗೆದುಕೊಳ್ಳುವ ಮನೆ.
(ಸಾಮಾನ್ಯವಾಗಿ ಬಹುವಚನದಲ್ಲಿ) ರಾಜಕೀಯ ಬೆಂಬಲ; ಚುನಾವಣೆಯಲ್ಲಿ ಬೆಂಬಲ ನೀಡುವ ರಾಜಕೀಯ ಹಿತಾಸಕ್ತಿಗಳು: building his fences for election ಚುನಾವಣೆಯಲ್ಲಿ ತನ್ನ ಬೆಂಬಲಕ್ಕೆ ರಾಜಕೀಯ ಹಿತಾಸಕ್ತಿಗಳನ್ನು ರಚಿಸುತ್ತಾ.
(ಕುದುರೆ ಮೊದಲಾದವು) (ಹಾರಬೇಕಾದ) ಅಡ್ಡಿ; ತಡೆ.
ಪದಗುಚ್ಛ
master of fence
ಕತ್ತಿವರಿಸೆ ನಿಪುಣ.
(ರೂಪಕವಾಗಿ) ಚರ್ಚಾಪಟು; ವಾದಕುಶಲ; ಚರ್ಚೆ, ವಾದಗಳಲ್ಲಿ ನಿಪುಣ.
put horse at fence ಕುದುರೆಯನ್ನು ಬೇಲಿ ಹಾರಲು ಬಿಡು.
sunk fence ಹಳ್ಳಬೇಲಿ; ಮೇಲಕ್ಕೆ ಕಾಣದಂತೆ ಒಳಗೆ ನೆಟ್ಟಿರುವ ಕಟಕಟೆ.
ನುಡಿಗಟ್ಟು
come down on right side of fence ಗೆದ್ದವರ ಕಡೆ ಸೇರು; ಗೆದ್ದೆತ್ತಿನ ಬಾಲಹಿಡಿ; ವಿಜಯಪಕ್ಷ ಸೇರು.
mending one’s fences
ರಾಜಿ ಯಾ ಸಂಧಾನದ ಮೂಲಕ ತನ್ನ ಸ್ಥಾನವನ್ನು ಭದ್ರಮಾಡಿಕೊಳ್ಳುವುದು.
ಒಬ್ಬನೊಡನೆ ಮತ್ತೆ ಸ್ನೇಹ ಬೆಳಸುವುದು.
sit on the fence ಅಡ್ಡಗೋಡೆ ಮೇಲೆ ದೀಪ ಇಡು; ವ್ಯಾಜ್ಯದಲ್ಲಿ ಯಾವ ಪಕ್ಷಕ್ಕೂ ಸೇರದೆ ತಟಸ್ಥನಾಗಿರು; ಯಾವ ಕಡೆ ಇದ್ದರೆ ಲಾಭ ಎನ್ನುವುದನ್ನು ಕಂಡುಹಿಡಿಯಲು ಕಾಯು.