See also 1feather
2feather ಹೆದರ್‍
ಸಕರ್ಮಕ ಕ್ರಿಯಾಪದ
  1. ಗರಿಗಳನ್ನು – ಒದಗಿಸು, ಅಣಿಗೊಳಿಸು.
  2. (ಗರಿಗಳಿಂದ) ಅಲಂಕರಿಸು.
  3. ಗರಿಗಳಿಂದ ಅಸ್ತರಿಹಾಕು.
  4. ಗರಿಗಳಿಂದ ಮುಚ್ಚು: feather an arrow ಬಾಣಕ್ಕೆ ಗರಿತೊಡಿಸು.
  5. ಗರಿಯಂತಹ ಅಲಂಕರಣಮಾಡು.
  6. (ದೋಣಿ ನಡೆಸುವುದರಲ್ಲಿ) ಗರಿಹುಟ್ಟುಹಾಕು; ಹುಟ್ಟುಹಾಕಿದ ಮೇಲೆ (ಹುಟ್ಟನ್ನು) ನೀರಿನ ಮೇಲ್ಮೈಗೆ ಸಮಾಂತರವಾಗಿಯೇ ಇಟ್ಟುಕೊಂಡು ಹಿಂತೆಗೆದುಕೊ ( ಅಕರ್ಮಕ ಕ್ರಿಯಾಪದ ಸಹ).
  7. (ವಾಯುಯಾನ ಮತ್ತು ನೌಕಾಯಾನ) ಗಾಳಿ ಯಾ ನೀರಿನ ಪ್ರತಿರೋಧ ಕಡಮೆಯಾಗುವ ರೀತಿಯಲ್ಲಿ (ನೋದಕಗಳನ್ನು) ತಿರುಗಿಸು, ತಿರುಗುವಂತೆ ಮಾಡು ( ಅಕರ್ಮಕ ಕ್ರಿಯಾಪದ ಸಹ).
  8. (ಬಂದೂಕದ ಬಳಕೆಯಲ್ಲಿ) ಹಕ್ಕಿಯನ್ನು ಕೊಲ್ಲದೆ ಗರಿ ಉದುರಿಸು.
  9. (ಹೆಲಿಕಾಪ್ಟರಿನ ಬ್ಲೇಡುಗಳ) ಆಪಾತಕೋನ (angle of incidence)ವನ್ನು ಬದಲಿಸು.
ಅಕರ್ಮಕ ಕ್ರಿಯಾಪದ
  1. ಗರಿಯಂತೆ (ಹಗುರವಾಗಿ) ತೇಲು, ಚಲಿಸು, ಯಾ ಒಲೆದಾಡು.
  2. (ಬೇಟೆನಾಯಿಯ ವಿಷಯದಲ್ಲಿ) ವಾಸನೆ ಹುಡುಕುತ್ತಿರುವಾಗ ಮೈ ಬಾಲಗಳನ್ನು ಅದುರಿಸು, ಅಲುಗಾಡಿಸು.
ನುಡಿಗಟ್ಟು
  1. feather ones nest ಅವಕಾಶ ಸಿಕ್ಕಿದಾಗ ಹಣ ಮಾಡಿಕೊ.
  2. tar and feather ಮೊದಲು ಟಾರು ಬಳಿದು ಆಮೇಲೆ ಗರಿ ಅಂಟಿಸಿ ಶಿಕ್ಷಿಸು.