See also 2feather
1feather ಹೆದರ್‍
ನಾಮವಾಚಕ
  1. (ಹಕ್ಕಿಯ) ಗರಿ.
  2. (ಸಮುದಾಯವಾಚಕವಾಗಿ) ಗರಿಗಳ ಸಮೂಹ.
  3. ಬೇಟೆಯ ಹಕ್ಕಿಗಳು.
  4. ಬಾಣಕ್ಕೆ ತೊಡಿಸಿರುವ ಹಕ್ಕಿಯ ಗರಿಯ ತುಂಡು(ಗಳು).
  5. (ಹ್ಯಾಟು ಮೊದಲಾದವುಗಳಲ್ಲಿ ಧರಿಸುವ) ಗರಿಕುಚ್ಚು; ಅಲಂಕಾರದ ಗರಿ; ಗರಿಯ ತುರಾಯಿ.
  6. (ಗರಿಯಂತಹ) ಹಗುರ ವಸ್ತು.
  7. ಗರಿ ದೋಷ; (ಒಂದು ರತ್ನದಲ್ಲಿ ಯಾ ಪ್ರಶಸ್ತವಾದ ಮಣಿಯಲ್ಲಿ ಕಾಣುವ) ಗರಿಯ ಆಕಾರದ ದೋಷ.
  8. (ದೋಣಿ ನಡೆಸುವುದರಲ್ಲಿ) ಗರಿಹುಟ್ಟು; ಹುಟ್ಟುಹಾಕಿದ ಮೇಲೆ ಹುಟ್ಟನ್ನು ನೀರಿನ ಮೇಲ್ಮೈಗೆ ಸಮಾಂತರವಾಗಿಯೇ ಇಟ್ಟುಕೊಂಡು ಹಿಂತೆಗೆದುಕೊಳ್ಳುವುದು.
  9. ನಾಯಿ ಕಾಲು ಮೊದಲಾದವುಗಳ ಮೇಲೆ ಬೆಳೆದಿರುವ ಉದ್ದವಾದ ಕೂದಲಿನ ಕುಚ್ಚು.
ನುಡಿಗಟ್ಟು
  1. a feather in one’s cap ಕೋಡು; ಒಬ್ಬನು ಹೆಮ್ಮೆಪಟ್ಟುಕೊಳ್ಳಬಹುದಾದ ವಿಷಯ; ಒಬ್ಬನಿಗೆ ಅಭಿಮಾನದ, ಗೌರವ ತರುವ ವಿಷಯ.
  2. birds of a feather ಒಂದೇ ಬಗೆಯ ಸ್ವಭಾವದವರು; ಒಂದೇ ಕೂಟದವರು.
  3. crop one’s feathers (ಒಬ್ಬನ) ಪುಕ್ಕ ಕತ್ತರಿಸು; ಗರ್ವಭಂಗಮಾಡು; ಕೊಬ್ಬುಇಳಿಸು.
  4. fur and feather ಬೇಟೆಯ ಮೃಗಗಳೂ ಪಕ್ಷಿಗಳೂ.
  5. in high (or full) feather ಗರಿಗೆದರಿ; ಉಲ್ಲಾಸವೇರಿ; ಉಲ್ಲಾಸ ಉಕ್ಕಿ.
  6. show the white feather ಪುಕ್ಕಲುತನ ತೋರಿಸು; ಹೇಡಿತನ ತೋರಿಸು (ಪಂದ್ಯದ ಹಕ್ಕಿಯ ಪುಕ್ಕದಲ್ಲಿ ಬಿಳಿಯ ಗರಿ ಇರುವುದು ಕೆಟ್ಟ ತಳಿಯ ಗುರುತು ಎಂಬುದರಿಂದ ಬಂದದ್ದು).
  7. you could have knocked me down with a feather ಬೆಕ್ಕಸಬೆರಗಾದೆ; ಚಕಿತನಾದೆ: when I saw him standing there, you could have knocked me down with a feather ಆ ಜಾಗದಲ್ಲಿ ಅವನು ನಿಂತಿದ್ದನ್ನು ನೋಡಿದಾಗ ನಾನು ಬೆಕ್ಕಸಬೆರಗಾದೆ.