See also 1extract
2extract ಎಕ್ಸ್‍ಟ್ರಾಕ್ಟ್‍
ಸಕರ್ಮಕ ಕ್ರಿಯಾಪದ
  1. (ಒಂದು ಪುಸ್ತಕದಲ್ಲಿನ ವಿಷಯಭಾಗ ಮೊದಲಾದವನ್ನು) ಎತ್ತಿ ಬರೆ; ಪ್ರತಿಮಾಡು; ನಕಲು ಮಾಡು.
  2. (ಪುಸ್ತಕ ಮೊದಲಾದವುಗಳಿಂದ ವಿಷಯಭಾಗವನ್ನು) ಎತ್ತಿತೆಗೆ; ಉದ್ಧರಿಸು; ಸಂಗ್ರಹ ಮಾಡು.
  3. (ಹಲ್ಲು, ಯಾ ಗಟ್ಟಿಯಾಗಿ ಸೇರಿಕೊಂಡಿರುವ ಏನನ್ನಾದರೂ) ಬಲವಂತದಿಂದ ಕೀಳು, ಸೆಳೆ, ಕಿತ್ತುಹಾಕು.
  4. (ಹಣ, ತಪ್ಪೊಪ್ಪಿಗೆ, ಮೊದಲಾದವನ್ನು) ಬಲವಂತದಿಂದ ಹೊರಡಿಸು; ಇಚ್ಛೆಗೆ ವಿರುದ್ಧವಾಗಿ ಸೆಳೆ.
  5. (ಹೀರುವಿಕೆ, ಒತ್ತಡ, ಆಸವನ, ಮೊದಲಾದವುಗಳಿಂದ) ಆಹರಿಸು; ರಸ ತೆಗೆ; ಸಾರತೆಗೆ.
  6. (ಯಾವುದೋ ಒಂದು ವಿಷಯದಿಂದ ಸಂತೋಷ, ಸಮಾಧಾನ, ಮೊದಲಾದವನ್ನು) ಪಡೆ: he extracted satisfaction from the success of his sons ತನ್ನ ಪುತ್ರರ ಯಶಸ್ಸಿನಿಂದ ಅವನು ತೃಪ್ತಿ ಪಡೆದನು.
  7. (ಪ್ರಾಚೀನ ಪ್ರಯೋಗ) (ಯಾವುದೋ ಒಂದರಿಂದ ತತ್ತ್ವ ಮೊದಲಾದವನ್ನು) ನಿಗಮನಮಾಡು.
  8. (ಗಣಿತ) ಆಹರಿಸು; (ಸಂಖ್ಯೆಯ) ಘಾತಮೂಲ ತೆಗೆ.