See also 2exercise
1exercise ಎಕ್ಸರ್ಸೈಸ್‍
ನಾಮವಾಚಕ
  1. (ದೇಹಾಂಗ, ಸಹಜಶಕ್ತಿ, ಅಧಿಕಾರ, ಹಕ್ಕು — ಇವುಗಳ) ಬಳಕೆ; ಪ್ರಯೋಗ; ಉಪಯೋಗ; ಪರಿಶ್ರಮ; ಚಲಾವಣೆ: will-power is strengthened by exercise ಇಚ್ಛಾಶಕ್ತಿಯು ಬಳಕೆಯಿಂದ ಬಲಗೊಳ್ಳುತ್ತದೆ.
  2. (ಸದ್ಗುಣಗಳು, ಕಸಬು, ಕರ್ತವ್ಯ, ಮತಾಚಾರ — ಇವುಗಳ) ಆಚರಣೆ; ಅಭ್ಯಾಸ; ಪಾಲನೆ; ಅನುಷ್ಠಾನ.
  3. (ಮುಖ್ಯವಾಗಿ ಆರೋಗ್ಯಕ್ಕಾಗಿ ಮಾಡುವ) ಅಂಗಸಾಧನೆ; ವ್ಯಾಯಮ; ಸಾಮು; ಗರಡಿ ಸಾಧನೆ: he plays golf chiefly for exercise ಮುಖ್ಯವಾಗಿ ವ್ಯಾಯಾಮಕ್ಕೋಸ್ಕರ ಅವನು ಗಾಲ್‍ ಆಡುತ್ತಾನೆ.
  4. (ದೈಹಿಕ, ಮಾನಸಿಕ ಯಾ ಆಧ್ಯಾತ್ಮಿಕ) ಶಿಕ್ಷಣ; ತರಬೇತು: an exercise in clear thinking ಸ್ಪಷ್ಟವಾಗಿ ಆಲೋಚನೆ ಮಾಡುವುದರಲ್ಲಿ ಶಿಕ್ಷಣ.
  5. (ದೈಹಿಕ, ಮಾನಸಿಕ, ಆಧ್ಯಾತ್ಮಿಕ ಶಿಕ್ಷಣಕ್ಕೋಸ್ಕರ ಗೊತ್ತು ಮಾಡಿದ) ಕಾರ್ಯ; ಕೆಲಸ; ಅಭ್ಯಾಸ.
  6. (ಬಹುವಚನದಲ್ಲಿ) ಸೈನಿಕ ಕವಾಯತು: military exercises ಸೈನಿಕ ಕವಾಯತು, ಕಾರ್ಯಾಚರಣೆ.
  7. (ಅಂಗಸಾಧನೆ, ಸ್ಪರ್ಧೆ, ಮೊದಲಾದವುಗಳ) ವ್ಯಾಯಾಮ, ಕಸರತ್ತು, ಮೊದಲಾದವು.
  8. ಸ್ನಾತಕ ಪದವಿ ಪಡೆಯಲು ಮಾಡಬೇಕಾದ ವಿದ್ವತ್ಪೂರ್ಣವಾದ ಭಾಷಣ, ಉಪನ್ಯಾಸ, ಮೊದಲಾದವು.
  9. ಓದು, ಸಂಗೀತ, ನೃತ್ಯ, ಮೊದಲಾದವುಗಳಿಗಾಗಿ ನಿಯಮಿಸಿದ ಅಭ್ಯಾಸಪಾಠ.
  10. ಆರಾಧನೆ; ಪೂಜಾಕರ್ಮ.
  11. (ಅಮೆರಿಕನ್‍ ಪ್ರಯೋಗ) (ಬಹುವಚನದಲ್ಲಿ) ಆಚರಣೆ; ಸಮಾರಂಭ: graduation exercises ಪದವಿದಾನ ಸಮಾರಂಭಗಳು.
ಪದಗುಚ್ಛ

object of the exercise ಕೆಲಸ ಮೊದಲಾದವುಗಳ ಮುಖ್ಯೋದ್ದೇಶ.