See also 1epic
2epic ಎಪಿಕ್‍
ನಾಮವಾಚಕ
  1. ಮಹಾಕಾವ್ಯ; ವೀರಕಾವ್ಯ; ಪುರಾಣಕಾವ್ಯ; ಇತಿಹಾಸ ಕಾವ್ಯ, ಉದಾಹರಣೆಗೆ ರಾಮಾಯಣ, ಇಲಿಯಡ್‍.
  2. ಮಹಾಕಾವ್ಯ; ಮಹಾಕಾವ್ಯವನ್ನು ಹೋಲುವ ವಸ್ತು: an epic in stone and marble ಕಲ್ಲು ಮತ್ತು ಅಮೃತಶಿಲೆಯಲ್ಲಿ ರಚಿಸಿದ ಮಹಾಕಾವ್ಯ.
  3. ಮಹಾಕೃತಿ; ಮಹಾಕಾವ್ಯದ ಮಾದರಿಯ ಯಾ ಪ್ರಮಾಣದ ಗ್ರಂಥ, ಚಲನಚಿತ್ರ, ಮೊದಲಾದವು: Moby Dick is an American epic ಮೋಬಿ ಡಿಕ್‍ ಅಮೆರಿಕದ ಒಂದು ಮಹಾ ಕೃತಿ.
  4. ಮಹಾಕಾವ್ಯ ವಸ್ತು; ಒಂದು ಮಹಾಕಾವ್ಯಕ್ಕೆ ಅರ್ಹ ವಿಷಯವಾಗಬಲ್ಲ ವಸ್ತು: the defence of Leningrad is a Russian epic ಲೆನಿನ್‍ಗ್ರಾಡ್‍ ರಕ್ಷಣೆ ರಷ್ಯದ ಮಹಾಕಾವ್ಯ ವಸ್ತು.