See also 2epic
1epic ಎಪಿಕ್‍
ಗುಣವಾಚಕ
  1. ಮಹಾಕಾವ್ಯದ; ವೀರಕಾವ್ಯದ; ವೀರಚರಿತ್ರೆಯ; ವೀರಕದನದ; ಪುರಾಣಕಾವ್ಯದ ಒಬ್ಬ ಯಾ ಹೆಚ್ಚು ವೀರಪುರುಷರ ಮಹಾಸಾಧನೆಗಳನ್ನು ಅವಿಚ್ಛಿನ್ನವಾಗಿ ಬಣ್ಣಿಸುವ: Homer’s Iliad is an epic poem ಹೋಮರನ ಇಲಿಯಡ್‍ (ವೀರಸಾಧನೆಗಳನ್ನು ವಿವರಿಸುವ) ಒಂದು ಮಹಾಕಾವ್ಯ.
  2. ಮಹಾಕಾವ್ಯಾರ್ಹ; ಮಹಾಕಾವ್ಯೋಚಿತ; ಮಹಾಕಾವ್ಯವಾಗಿ ಕಥನಯೋಗ್ಯ; ಮಹಾಕಾವ್ಯವಾಗಿ ವಾಚನಕ್ಕೆ ಉಚಿತವಾದ; ಮಹಾಕಾವ್ಯಕ್ಕೆ ತಕ್ಕ: an epic hero ಮಹಾಕಾವ್ಯಕ್ಕೆ ಯೋಗ್ಯನಾದ ವೀರ.
  3. ವೀರ; ವೀರಮಾದರಿಯ; ಪರಾಕ್ರಮಕ್ಕೆ ಆದರ್ಶವಾದ; ಧೀರ ಲಕ್ಷಣದ; ವೀರಮಟ್ಟದ; ವೀರ ಪ್ರಮಾಣದ: the epic events of the war ಯುದ್ಧದ ವೀರ ಘಟನೆಗಳು.
  4. (ಮುಖ್ಯವಾಗಿ ಗಾತ್ರ ಯಾ ವ್ಯಾಪ್ತಿಯಲ್ಲಿ) ಅಸಾಧಾರಣ; ಅಸಾಮಾನ್ಯ; ಅದ್ಭುತ: a crime wave of epic proportions ಅಸಾಧಾರಣ ಪ್ರಮಾಣದ ಅಕೃತ್ಯಗಳ ಪರಂಪರೆ.
  5. ಮಹಾ; ಬೃಹತ್‍; ದೊಡ್ಡ; ಭಾರೀ ಪ್ರಮಾಣದಲ್ಲಿ ಕೈಗೊಂಡ: the final paragraph of this epic ಈ ಮಹಾ ಕಾರ್ಯದ ಅಂತಿಮ ಪರಿಚ್ಛೇದ.
  6. ಘನವಾದ; ಭವ್ಯ; ವೈಭವಪೂರ್ಣ; ವೈಭವೋಪೇತ; ಪರಿಣಾಮಕಾರಕ; ಅಮೋಘ: a faithful record of an epic expedition ವೈಭವಪೂರ್ಣ ದಂಡಯಾತ್ರೆಯ ಯಥಾವತ್ತಾದ ದಾಖಲೆ.
  7. ಮಹಾಕಾವ್ಯದಂತಿರುವ; ಮಹಾಕಾವ್ಯದಂಥ: epic novel ಮಹಾಕಾವ್ಯದಂಥ ಕಾದಂಬರಿ.
ಪದಗುಚ್ಛ
  1. folk epic = ಪದಗುಚ್ಛ \((2)\).
  2. national epic ರಾಷ್ಟ್ರ ಮಹಾಕಾವ್ಯ; ಒಂದು ರಾಷ್ಟ್ರದ ಪುರ್ವಚರಿತ್ರೆಯ ಕಲ್ಪನೆಯನ್ನೊಳಗೊಂಡ ಯಾವುದೇ ಬಗೆಯ ಕಾವ್ಯ.