See also 1enough  3enough
2enough ಇನಹ್‍
ನಾಮವಾಚಕ

ಸಾಕಾಗುವಷ್ಟು; ಸಾಕಷ್ಟು; ತಕ್ಕಷ್ಟು; ಅಗತ್ಯವಾದಷ್ಟು; ಬೇಕಾದಷ್ಟಕ್ಕಿಂತ ಸಂಖ್ಯೆಯಲ್ಲಿ ಯಾ ಪ್ರಮಾಣದಲ್ಲಿ ಕಡಮೆ ಇಲ್ಲದಷ್ಟು: we have enough of everything except milk ನಮ್ಮಲ್ಲಿ ಹಾಲು ಹೊರತು ಉಳಿದುದೆಲ್ಲ ಸಾಕಷ್ಟಿದೆ.

ಪದಗುಚ್ಛ
  1. enough and to spare ಸಾಕಾಗಿ ಮಿಗುವಷ್ಟು.
  2. you have done more than enough ನೀನು ಅಗತ್ಯವಾದುದಕ್ಕಿಂತ ಹೆಚ್ಚಾಗಿಯೇ ಮಾಡಿದ್ದೀಯೆ.
ನುಡಿಗಟ್ಟು
  1. be willing enough ಸಾಕಷ್ಟು ಅಭಿಲಾಷೆ ಹೊಂದಿರು (ಆದರೆ ಸಾಮರ್ಥ್ಯವಿಲ್ಲದಿರು).
  2. cry enough (ಸೋಲೊಪ್ಪಿ) ಸಾಕುಸಾಕನ್ನು.
  3. enough is as good as a feast ಸಾಕಷ್ಟು ಸಿಕ್ಕಿದರೆ ಸಂತರ್ಪಣೆ ಆದಂತೆ.
  4. enough of a person ಒಬ್ಬನಿಂದ ಸಾಕಾಗಿಹೋಗು: I have had enough of him ಅವನಿಂದ ನನಗೆ ಸಾಕಾಗಿಹೋಯಿತು.
  5. enough of this folly ಸಾಕು ಈ ಅವಿವೇಕ, ನಿಲ್ಲಿಸು.
  6. enough said ಹೇಳಿರುವುದು ಸಾಕು; ಹೆಚ್ಚು ಹೇಳುವ ಅಗತ್ಯವಿಲ್ಲ.
  7. enough to do ಸಾಕಾಗಿಹೋಗು; ಸಾಕಷ್ಟು ಕೆಲಸವಾಗು; ಸುಲಭವಲ್ಲದಿರು: I had enough to do to catch the train ರೈಲು ಹಿಡಿಯುವುದೇ ನನಗೆ ಸಾಕಾಗಿಹೋಯಿತು.
  8. make enough noise (ತನ್ನ ವಾದ, ಪಕ್ಷ, ಮೊದಲಾದವನ್ನು ಸಮರ್ಥಿಸಿಕೊಳ್ಳಲು) ಸಾಕಷ್ಟು ಗಲಾಟೆ ಮಾಡು; ಗಲಾಟೆ ಎಬ್ಬಿಸು; ಕೂಗಾಡು.