See also 1eclipse
2eclipse ಇಕ್ಲಿಪ್ಸ್‍
ಸಕರ್ಮಕ ಕ್ರಿಯಾಪದ
  1. (ಆಕಾಶಕಾಯದ ವಿಷಯದಲ್ಲಿ) ಗ್ರಹಣ ಹಿಡಿಸು; ಗ್ರಹಣ ಉಂಟಾಗುವಂತೆ ಮಾಡು: the moon eclipses the sun ಚಂದ್ರ ಸೂರ್ಯನಿಗೆ ಗ್ರಹಣ ಹಿಡಿಸುತ್ತದೆ.
  2. (ಮುಖ್ಯವಾಗಿ ದೀಪಹದ ಬೆಳಕನ್ನು) ಮರೆಮಾಡು; ಅಡ್ಡಿಮಾಡು; ತಡೆಮಾಡು.
  3. (ರೂಪಕವಾಗಿ) (ಹೋಲಿಸುವುದರಿಂದ ಇತರ ವ್ಯಕ್ತಿ, ವಸ್ತು ಯಾ ವಿಷಯವನ್ನು) ಕಳೆಗುಂದಿಸು; ಮಂಕಾಗಿಸು; ಮಸುಳಿಸು; ನಿಸ್ತೇಜಗೊಳಿಸು; ಕಾಂತಿಹೀನಮಾಡು; ಮಸುಕುಗೊಳಿಸು.
  4. (ರೂಪಕವಾಗಿ) ಕಾಂತಿಯಿಂದ ಮೀರಿಸು; ಹೆಚ್ಚು ಪ್ರಕಾಶಮಾನವಾಗಿರು; ಹೆಚ್ಚು ಉಜ್ಜ್ವಲವಾಗಿರು.
  5. (ರೂಪಕವಾಗಿ) ಮೀರಿಸು; ಅತಿಶಯಿಸು: this discovery eclipsed all the rest ಈ ಸಂಶೋಧನೆ ಉಳಿದೆಲ್ಲವನ್ನೂ ಮೀರಿಸಿತು.