See also 2eclipse
1eclipse ಇಕ್ಲಿಪ್ಸ್‍
ನಾಮವಾಚಕ
  1. (ಖಗೋಳ ವಿಜ್ಞಾನ) ಗ್ರಹಣ; ಸಾಮಾನ್ಯವಾಗಿ ಪ್ರಕಾಶವುಳ್ಳ ಯಾವುದೇ ಖಗೋಳಕಾಯವು ಭೂಮಿಯ ನೆರಳಿನಲ್ಲಿ ಬರುವುದರಿಂದಾಗಲಿ ಇನ್ನೊಂದು ಖಗೋಳಕಾಯದ ಹಿಂಬದಿಗೆ ಹೋಗುವುದರಿಂದಾಗಲಿ ನಮಗೆ ಕಾಣದಂತಾಗುವುದು, ಯಾ ಹಾಗೆ ಕಾಣದಂತಾದ ಕಾಲಾವಧಿ.
  2. (ರೂಪಕವಾಗಿ) ಗ್ರಹಣ; ಯಾವುದರದೇ ತಾತ್ಕಾಲಿಕ ಅದರ್ಶನ, ಅಭಾವ, ಅವನತಿ: in the seventeenth century, science emerged from a long eclipse ವಿಜ್ಞಾನವು ಬಹುಕಾಲ ಹಿಡಿದಿದ್ದ ಗ್ರಹಣದಿಂದ ಹದಿನೇಳನೆಯ ಶತಮಾನದಲ್ಲಿ ಬಿಡುಗಡೆಗೊಂಡಿತು.
  3. ಕಾಂತಿಗುಂದು; ಪ್ರಕಾಶಾಭಾವ; ಪ್ರಕಾಶಶೂನ್ಯತೆ; ಬೆಳಕಿಲ್ಲದಿರುವಿಕೆ; ಕಾಂತಿಹೀನತೆ.
  4. ಕಳೆಗುಂದು; ತೇಜೋಹಾನಿ; ನಿಸ್ತೇಜ; ಮ್ಲಾನತೆ.
  5. ಬೆಳಕು, ಪ್ರಕಾಶ, ದೀಪ — ಮರೆ; (ಸಮುದ್ರದಲ್ಲಿಯ) ದೀಪಹದ ಬೆಳಕನ್ನು ಒಂದು ಕ್ಲುಪ್ತ ಕಾಲಕ್ರಮದಲ್ಲಿ ಪದೇಪದೇ ಮರೆಮಾಡುತ್ತ ಹೋಗುವುದು.
ಪದಗುಚ್ಛ

in eclipse (ಪಕ್ಷಿಗಳ ವಿಷಯದಲ್ಲಿ) ಕಳೆಗುಂದಿ; ನಿಸ್ತೇಜವಾಗಿ; ಹೆಣ್ಣನ್ನು ಆಕರ್ಷಿಸುವ ಅಂದವಾದ ಗರಿಗಳನ್ನು ಕಳೆದುಕೊಂಡು.