See also 1echo
2echo ಎಕೋ
ಸಕರ್ಮಕ ಕ್ರಿಯಾಪದ
  1. (ಧ್ವನಿಯನ್ನು, ನಾದವನ್ನು) ಪ್ರತಿಧ್ವನಿಸು; ಮಾರುಲಿ; ಮಾರ್ದನಿಸು.
  2. (ಇನ್ನೊಬ್ಬರ ಮಾತನ್ನು ಯಾ ಅಭಿಪ್ರಾಯವನ್ನು) ಮಾರುಚ್ಚರಿಸು; ಪುನರುಚ್ಚರಿಸು.
  3. (ಇನ್ನೊಬ್ಬರ ಮಾತು ಯಾ ಅಭಿಪ್ರಾಯಗಳನ್ನು) ಅನುಕರಿಸು; ಅನುಕರಣೆಮಾಡು.
ಅಕರ್ಮಕ ಕ್ರಿಯಾಪದ
  1. (ಸ್ಥಳಗಳ ವಿಷಯದಲ್ಲಿ) ಮರುದನಿಯಿಂದ ತುಂಬಿರು; ಮಾರ್ದನಿಸು; ಪ್ರತಿಧ್ವನಿಸು; ಹೊಳಲಿಡು; ಅನುರಣಿಸು.
  2. (ಧ್ವನಿ, ನಾದಗಳ ವಿಷಯದಲ್ಲಿ) ಮಾರುಲಿ; ಪುನರಾವರ್ತಿಸು; ಪ್ರತಿಧ್ವನಿಗೊಡು; ಹೊಳಲಿಡು; ಮಾರ್ದನಿ ಕೊಡು.
  3. (ಬ್ರಿಜ್‍, ವಿಸ್ಟ್‍ ಆಟಗಳಲ್ಲಿ ತನ್ನ ಜೊತೆಗಾರನು ತುರುಪು ಮೊದಲಾದವನ್ನು ಆಡಿ ಕೊಟ್ಟ ಸೂಚನೆಗೆ ಪ್ರತಿಯಾಗಿ ತಾನೂ ಅದನ್ನೇ ಆಡಿ) ಪ್ರತಿಸೂಚನೆ ಕೊಡು.