See also 2echo
1echo ಎಕೋ
ನಾಮವಾಚಕ
(ಬಹುವಚನ echoes).
  1. ಮರುಧ್ವನಿ; ಪ್ರತಿಧ್ವನಿ; ಅನುರಣನ; ಮಾರ್ದನಿ; ಮಾರುಲಿ; ಹೊಳಲು; ಎದುರುಲಿ; ಧ್ವನಿ ತರಂಗಗಳು ಪ್ರತಿಫಲಿಸಿ ಧ್ವನಿಯ ಪುನರಾವರ್ತನೆಯಾಗುವುದು.
  2. (Echo) (ಗ್ರೀಕ್‍ ಪುರಾಣ) ಪ್ರತಿಧ್ವನಿ ದೇವತೆ.
  3. (ಪ್ರಸಿದ್ಧ ಕವಿ, ಭಾವ, ಭಾವನೆ, ಶೈಲಿ, ಮೊದಲಾದವುಗಳ) ಗಾಢ ಅನುಕರಣ; ಹತ್ತಿರದ ಹೋಲಿಕೆ; ಸಮೀಪಸಾಮ್ಯ: containing strong echoes from Milton ಮಿಲ್ಟನ್ನನ ಕಾವ್ಯದ ಅನುಕರಣವಿರುವ, ಹತ್ತಿರದ ಹೋಲಿಕೆ ಇರುವ.
  4. ಅನುಕರಣಕ; ಅನುಕರಣಕಾರಿ; ಅನುಕರಣೆ ಮಾಡುವವನು; ಅನುಕರಿಸುವವನು.
  5. ಅಂತ್ಯಾಕ್ಷರಿ; ಒಂದು ಪಾದದ ಅಂತ್ಯಾಕ್ಷರಗಳನ್ನು ಮುಂದಿನ ಪಾದದ ಯಾ ಮುಂದಿನ ಪರ್ಯಾಯ ಪಾದದ ಆದ್ಯಕ್ಷರಗಳನ್ನಾಗಿ ಬಳಸುವ ಚಮತ್ಕಾರ.
  6. (ಬ್ರಿಜ್‍ ಯಾ ವಿಸ್ಟ್‍ ಆಟದಲ್ಲಿ ತನ್ನ ಜೊತೆಗಾರನು ತುರುಪು ಮೊದಲಾದವನ್ನು ಆಡಿ ನೀಡಿದ ಸೂಚನೆಗೆ ಪ್ರತಿಯಾಗಿ ತಾನೂ ಅದನ್ನೇ ಆಡಿ ತೋರಿಸುವ) ಪ್ರತಿಸೂಚನೆ.
  7. ತ್ತಪತ್ರಿಕೆ; ಸಮಾಚಾರಪತ್ರಿಕೆ; ಪತ್ರಿಕೆಗಳ ಹೆಸರಾಗಿ ಬಳಸುವ ಪದ: Daily Echo.
  8. ಪ್ರತಿಫಲಿತ (ರೇಡಿಯೋ ಯಾ ರೇಡಾರ್‍) ತರಂಗ.
  9. ಫಲಿತಾಂಶ; ಪರಿಣಾಮ; ಫಲಶ್ರುತಿ; ಪ್ರತಿಕ್ರಿಯೆ: the economic collapse had dangerous political echoes ಆ ಆರ್ಥಿಕ ಕುಸಿತದಿಂದಾಗಿ ಅಪಾಯಕರ ರಾಜಕೀಯ ಪ್ರತಿಕ್ರಿಯೆಗಳುಂಟಾದವು.
ನುಡಿಗಟ್ಟು

(cheer person etc.) to the echo (ವ್ಯಕ್ತಿ ಮೊದಲಾದವರಿಗೆ) ಗಟ್ಟಿಯಾಗಿ, ಜೋರಾಗಿ, ಮೊಳಗುವಂತೆ, ಮಾರ್ದನಿಸುವಂತೆ, ಪ್ರತಿಧ್ವನಿಸುವಂತೆ (ಜಯಕಾರಮಾಡು).