2east
ಈಸ್ಟ್
ನಾಮವಾಚಕ
- ಮೂಡಲು; ಪೂರ್ವ (ದಿಕ್ಕು).
- (East) ಪ್ರಾಚ್ಯ; ಪೌರಸ್ತ್ಯ ಯಾ ಪೂರ್ವ ದೇಶಗಳು; ಯೂರೋಪಿಗೆ ಪೂರ್ವದಿಕ್ಕಿನಲ್ಲಿರುವ ದೇಶಗಳು.
- (ಚರ್ಚಿನ ಕಟ್ಟಡ ಪೂರ್ವಾಭಿಮುಖವಾಗಿರಲಿ, ಇಲ್ಲದಿರಲಿ) ಪೂಜಾವೇದಿಕೆಯಿರುವ ಚರ್ಚಿನ ತುದಿ, ಭಾಗ.
- (ದೇಶದ ಯಾ ಪಟ್ಟಣದ) ಪೂರ್ವಭಾಗ; ಮೂಡಲ ಭಾಗ.
- ಪೂರ್ವ ಯೂರೋಪಿನ ಕಮ್ಯುನಿಸ್ಟ್ ದೇಶಗಳು.
- (ಚರಿತ್ರೆ) ಅರ್ವಾಚೀನ ರೋಮನ್ ಸಾಮ್ರಾಜ್ಯದ ಪೂರ್ವಭಾಗ; ಪೂರ್ವ ರೋಮ್ ಸಾಮ್ರಾಜ್ಯ.
- ‘ಪೂರ್ವ’ (ವೆಂದು ಪರಿಗಣಿತವಾಗಿರುವ ಸ್ಥಾನದಲ್ಲಿ ಕುಳಿತುಕೊಳ್ಳುವ) ಇಸ್ಪೀಟು ಆಟಗಾರ.
ಪದಗುಚ್ಛ
- east by north ಪೂರ್ವಕ್ಕೂ ಪೂರ್ವ ಈಶಾನ್ಯಕ್ಕೂ ನಡುವಣ ದಿಕ್ಕು.
- east by south ಪೂರ್ವಕ್ಕೂ ಪೂರ್ವ ಆಗ್ನೇಯಕ್ಕೂ ನಡುವಣ ದಿಕ್ಕು.
- Far East ದೂರಪ್ರಾಚ್ಯ; ಚೀನಾ, ಜಪಾನ್, ಮೊದಲಾದ ದೇಶಗಳು.
- Middle East ಮಧ್ಯಪ್ರಾಚ್ಯ; ಮುಖ್ಯವಾಗಿ ಈಜಿಪ್ಟ್ನಿಂದ ಹಿಡಿದು ಇರಾನನ್ನೂ ಒಳಗೊಂಡ ದೇಶಗಳು.
- Near East ಸಮೀಪಪ್ರಾಚ್ಯ:
- = ಪದಗುಚ್ಛ \((4)\).
- (ಪ್ರಾಚೀನ ಪ್ರಯೋಗ) ತುರ್ಕಿ ಮತ್ತು ಬಾಲ್ಕನ್ ದೇಶಗಳು.
- the East (ಅಮೆರಿಕನ್ ಪ್ರಯೋಗ) ಮುಖ್ಯವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಈಶಾನ್ಯ ಭಾಗ.