See also 1crown
2crown ಕ್ರೌನ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗೆ, ತಲೆಗೆ) ಮುಡಿಯಿಡಿ; ಕಿರೀಟವಿಡು; ಕಿರೀಟ ತೊಡಿಸು; ಕಿರೀಟಧಾರಣೆ ಮಾಡು.
  2. (ವ್ಯಕ್ತಿಗೆ) (ರಾಜಾಧಿಕಾರದ) ಪಟ್ಟಕಟ್ಟು; ರಾಜ್ಯಾಭಿಷೇಕಮಾಡಿಸು: crown him, crown him king ಅವನಿಗೆ ರಾಜ್ಯಾಭಿಷೇಕ ಮಾಡಿಸು, ಪಟ್ಟಕಟ್ಟು.
  3. (ರೂಪಕವಾಗಿ) ಗೌರವಿಸು; ಬಹುಮಾನಿಸು.
  4. (ರೂಪಕವಾಗಿ ಸಹ) ಕಿರೀಟಪ್ರಾಯವಾಗು; ಮುಡಿಯಾಗು; ಮುಖ್ಯಾಭರಣವಾಗು; ಕಳಶಪ್ರಾಯವಾಗು; ಭೂಷಣಪ್ರಾಯವಾಗು; ನೆತ್ತಿ ಯಾ ಶಿಖರ ಆಗು.
  5. ಸುತ್ತುವರಿ; ಸುತ್ತಲೂ–ಇರು, ಸೇರು.
  6. ಹಲ್ಲಿನ ಸವೆದ ಯಾ ಮುರಿದ ಭಾಗವನ್ನು ಚಿನ್ನ ಮೊದಲಾದವುಗಳಿಂದ ಭದ್ರಪಡಿಸು.
  7. ಹಗ್ಗದ ತುದಿಯಲ್ಲಿ ಗಂಟುಹಾಕು.
  8. (ಅಶಿಷ್ಟ) ತಲೆಯ ಮೇಲೆ–ಮಟ್ಟು, ಹೊಡೆ.
  9. ಪೂರ್ತಿಗೊಳಿಸು; ಪೂರ್ಣಮಾಡು.
  10. (ಪ್ರಯತ್ನಗಳನ್ನು) ಕೈಗೂಡಿಸು; ಸಫಲಗೊಳಿಸು.
  11. (ಡ್ರಾಹ್‍ಟ್ಸ್‍ ಆಟದಲ್ಲಿ) ಕಾಯನ್ನು ರಾಜನಾಗಿಸು.
  12. ತುಳುಕುವಂತೆ ತುಂಬು.
  13. ತುದಿಯಲ್ಲಿರು; ಮೇಲಿರು; ಶಿಖರದಲ್ಲಿರು; ಅಗ್ರದಲ್ಲಿರು.
  14. (ಸೀಸೆ) ಮುಚ್ಚಳ ಮುಚ್ಚು.
ಪದಗುಚ್ಛ

crowned with success ಗೆದ್ದ; ಜಯಹೊಂದಿದ; ಜಯಭೇರಿ ಹೊಡೆದ.

ನುಡಿಗಟ್ಟು

to crown(it) all

  1. (ವ್ಯಂಗ್ಯವಾಗಿ) ದುರದೃಷ್ಟಕ್ಕೆ ಸರಿಯಾಗಿ; ದುರದೃಷ್ಟ ಪೂರ್ತಿಮಾಡಲು; ದುರದೃಷ್ಟ ಸಾಲದೆಂಬಂತೆ: it rained, we had no umbrellas, and to crown all, we missed the last bus and had to walk home ನಮ್ಮ ಹತ್ತಿರ ಛತ್ರಿ ಇರಲ್ಲಿಲ್ಲ, ದುರದೃಷ್ಟ ಸಾಲದೆಂಬಂತೆ ನಮಗೆ ಕೊನೆಯ ಬಸ್ಸೂ ತಪ್ಪಿಹೋಗಿ, ನಾವು ಮನೆಯವರೆಗೂ ನಡೆದುಕೊಂಡು ಹೋಗಬೇಕಾಯಿತು.
  2. ಮುಕ್ತಾಯಗೊಳಿಸು; ಪೂರ್ಣಗೊಳಿಸು.