See also 2crown
1crown ಕ್ರೌನ್‍
ನಾಮವಾಚಕ
  1. (ಮುಖ್ಯವಾಗಿ ವಿಜಯಸಂಕೇತವಾಗಿ ಧರಿಸುವ ಹೂವಿನ ಯಾ ಎಲೆಯ) ಶಿರೋಮಾಲೆ; ಶಿರೋವೇಷ್ಟನ.
  2. ಬಹುಮಾನ; ಸತ್ಕಾರ.
  3. (ದೊರೆಯ ರತ್ನಖಚಿತ, ಚಿನ್ನದ) ಕಿರೀಟ; ಮುಕುಟ; ಮಕುಟ; ಮುಡಿ. Figure: crown-3
  4. (Crown, ರೂಪಕವಾಗಿ) ರಾಜ; ರಾಣಿ; ಮಹಾಸ್ವಾಮಿ; ರಾಜಪ್ರಭುತ್ವದ ಅತ್ಯುನ್ನತ ಅಧಿಕಾರಿ.
  5. ಕಿರೀಟಾಕಾರದ (ಯಾವುದಾದರೂ) –ಒಡವೆ, ವಸ್ತು.
  6. ಭೂಷಣ; ಕಿರೀಟದಂತೆ ಭೂಷಣಪ್ರಾಯವಾದ ವಸ್ತು.
  7. ಕ್ರೌನು; (ಬ್ರಿಟನ್ನಿನ) 25 ಪೆನ್ನಿ ಬೆಲೆಯ ನಾಣ್ಯ (ಹಿಂದೆ 5 ಷಿಲಿಂಗ್‍ ನಾಣ್ಯ).
  8. ಕ್ರೌನ್‍; ಡೆನ್ಮಾರ್ಕ್‍, ಐರ್ಲಂಡ್‍, ನಾರ್ವೆ, ಸ್ವೀಡನ್‍ ದೇಶಗಳ ಒಂದು ನಾಣ್ಯ (ಮುಖ್ಯವಾಗಿ krona, krone).
  9. (ಮುಖ್ಯವಾಗಿ ತಲೆ, ಬೆಟ್ಟ, ಮರ ಮೊದಲಾದವುಗಳ) ನೆತ್ತಿ; ತುದಿ; ಕೋಡು; ಅಗ್ರ; ಶಿಖರ; ಮೇಲ್ಭಾಗ.
  10. ತಲೆ; ಶಿರ.
  11. ಪಟ್ಟೆಹೊಡೆದ ರತ್ನದ ತುದಿ.
  12. ಕಮಾನಿನ ಮಧ್ಯಭಾಗ, ನೆತ್ತಿ ಯಾ ಅಗ್ರಭಾಗ: crown of the causeway ಸೇತುವೆ ಕಮಾನಿನ ನೆತ್ತಿ.
  13. ಹ್ಯಾಟಿನ ಯಾ ಪರಂಗಿ ಟೋಪಿಯ ಮೇಲ್ಭಾಗ.
  14. ದಂತಾಗ್ರ; ಒಸಡಿನಿಂದ ಹೊರಕ್ಕೆ ಕಾಣುವ ಹಲ್ಲಿನ ಭಾಗ ಯಾ ಕೃತಕವಾಗಿ ತಯಾರಿಸಿದ ಈ ಭಾಗ.
  15. ಕ್ರೌನು; ಕಿರೀಟ; $504 \times 384$ ಮಿಲಿಮೀಟರ್‍ ಅಳತೆಯ ಕಾಗದ.
  16. ಲಗಾಮು ನೆತ್ತಿ; ಲಗಾಮಿನಲ್ಲಿ ಕುದುರೆಯ ತಲೆಯ ಮೇಲೆ ಬರುವ ಭಾಗ.
  17. ಸಾರಂಗದ ಕೊಂಬಿನಲ್ಲಿ ಕವಲೊಡೆದಿರುವ ಭಾಗ.
  18. ತುದಿಗಂಟು; ಹಗ್ಗದ ತುದಿಯಲ್ಲಿ ಎಳೆಗಳು ಬಿಚ್ಚಿಕೊಳ್ಳದ ಹಾಗೆ ಹಾಕಿದ ಗಂಟು.
  19. ಲಂಗರಿನಲ್ಲಿ ಕವಲುಗಳು, ಕೊಂಡಿಗಳು ಕಾವನ್ನು ಸೇರುವ ಭಾಗ.
  20. (ರೂಪಕವಾಗಿ) ಪರಾಕಾಷ್ಠೆ; ಪರಿಪೂರ್ಣತೆ; ಯಾವುದೇ ವಸ್ತುವಿನ, ಕೆಲಸದ ಅತ್ಯುನ್ನತ ಯಾ ಅತ್ಯುತ್ತಮ ಮಟ್ಟ.
  21. ಹಕ್ಕಿಯ–ಜುಟ್ಟು, ಶಿಖೆ.
  22. ಭೂಮಿಯಿಂದ ತುಸು ಮೇಲೆ ಮತ್ತು ತುಸು ಕೆಳಗೆ ಇರುವ ಸಸ್ಯದ ಭಾಗ.
ಪದಗುಚ್ಛ

crown and anchor ಕಿರೀಟಲಂಗರು ಆಟ; ಕಿರೀಟ, ಲಂಗರು ಮತ್ತು ಇಸ್ಪೀಟಿನ ನಾಲ್ಕು ರಂಗುಗಳನ್ನು ಪ್ರತಿಯೊಂದು ಮುಖದಲ್ಲೂ ಕೆತ್ತಿರುವ ಮೂರು ದಾಳಗಳಿಂದ ಆಡುವ, ಆಟಗಾರರು ಅದೇ ಮೂರು ಚಿತ್ರಗಳಿರುವ ಹಾಸು ಯಾ ಮಣೆಯ ಮೇಲೆ ತಮ್ಮ ಪಣಗಳನ್ನು ಒಡ್ಡುವ, ಒಂದು ಬಗೆಯ ಜೂಜಾಟ.

ನುಡಿಗಟ್ಟು

crown of thorns

  1. ಮುಳ್ಳು–ಕಿರೀಟ, ಮುಡಿ; ಕಷ್ಟಗಳು ಮತ್ತು ಕ್ಲೇಶಗಳು.
  2. ಅಕೆಂಥಾಸ್ಟರ್‍ ಕುಲದ, ವಿಷಪೂರಿತ ನಕ್ಷತ್ರ–ಮೀನು.