See also 1bear  2bear  3bear
4bear ಬೇರ್‍
ಕ್ರಿಯಾಪದ

(ಭೂತರೂಪ bore, ಪ್ರಾಚೀನ ಪ್ರಯೋಗ bare; ಭೂತಕೃದಂತ borne ಯಾ born; ಕರ್ಮಣಿಪ್ರಯೋಗದಲ್ಲಿ, ಹುಟ್ಟಿಗೆ ಅನ್ವಯಿಸಿದಾಗborn, ತಾಯಿಗೆ ಅನ್ವಯಿಸಿದಾಗ borne ಎಂದು ಪ್ರಯೋಗ)

ಸಕರ್ಮಕ ಕ್ರಿಯಾಪದ
  1. (ಕಾವ್ಯಪ್ರಯೋಗ ಯಾ ಶಿಷ್ಟ ಪ್ರಯೋಗದಲ್ಲಿ) ಹೊರು: ವಹಿಸು.
  2. (ಧ್ವಜವನ್ನು) ಹೊರು; ವಹಿಸು.
  3. (ವಂಶಲಾಂಛನವನ್ನು) ಕಾಣುವಂತೆ ಧರಿಸು.
  4. (ಆಯುಧವನ್ನು) ಹೊರು; ಒಯ್ಯಿ.
  5. (ಗುರುತುಗಳನ್ನು) ತಳೆದಿರು; ಹೊಂದಿರು: bore his signature ಅವನ ಸಹಿ ಹೊಂದಿತ್ತು.
  6. (ಹೆಸರನ್ನು) ತಳೆದಿರು; ಹೊಂದಿರು; ಧರಿಸಿರು; ಹೊತ್ತಿರು.
  7. (ಯಾವುದೇ ಸಂಬಂಧವನ್ನಾಗಲಿ ಯಾ ನಿರ್ದೇಶಿಸಿದ ಅನುಪಾತ ಸಂಬಂಧವನ್ನಾಗಲಿ) ಹೊಂದಿರು: the relation that price bears to profit ಬೆಲೆಯು ಲಾಭಕ್ಕೆ ಹೊಂದಿರುವ ಅನುಪಾತ ಸಂಬಂಧ.
  8. (ಅಗತ್ಯವಾದ ಸಹಾಯ, ಸಾಕ್ಷ್ಯ, ಮೊದಲಾದವನ್ನು) ತರು; ನೀಡು; ಮಾಡು; ಒದಗಿಸು: bear witness ಸಾಕ್ಷ್ಯ ಒದಗಿಸು. bear a hand ಸಹಾಯ ಮಾಡು.
  9. (ಅಧಿಕಾರ ಮೊದಲಾದವನ್ನು) ನಡೆಸು; ಚಲಾಯಿಸು: to bear authority ಅಧಿಕಾರವನ್ನು ನಡೆಸುವುದು.
  10. (ಮನಸ್ಸಿನಲ್ಲಿ, ಹೃದಯದಲ್ಲಿ, ಅಂತರಂಗದಲ್ಲಿ) ತಾಳು; ತಳೆ; ತಳೆದಿರು: bear a grudge ಅಸೂಯೆ ತಳೆದಿರು.
  11. (ಸೈನಿಕನಾಗಿ ಆಯುಧಗಳನ್ನು ಯಾ ವಂಶಲಾಂಛನಗಳನ್ನು) ತೊಡು; ಹಿಡಿ; ಧರಿಸು: bear arms ಆಯುಧ ತೊಡು. bear the sword ಕತ್ತಿ ಹಿಡಿ.
  12. (ಹೊಣೆ, ವೆಚ್ಚ ಯಾ ಭಾರವನ್ನು) ಹೊರು: ಹೊತ್ತುಕೊ; ವಹಿಸು; ತಡೆದುಕೊ: he bore the cost ಅವನು ವೆಚ್ಚದ ಭಾರವನ್ನು ವಹಿಸಿಕೊಂಡ.
  13. (ಪರೀಕ್ಷೆ ಮೊದಲಾದವನ್ನು) ಗೆದ್ದುಕೊ; ಜಯಿಸಿಕೊ; ಯಶಸ್ವಿಯಾಗಿ ನಿರ್ವಹಿಸು.
  14. (ನೋವು ಮೊದಲಾದವನ್ನು) ತಾಳಿಕೊ; ಸಹಿಸಿಕೊ; ಸೈರಿಸಿಕೊ: grin and bear it (ಬಂದ ಕಷ್ಟವನ್ನು) ನಗು ನಗುತ್ತಾ ಸಹಿಸಿಕೊ; ಶಾಂತಿಯಿಂದ ಸೈರಿಸಿಕೊ: cannot bear him ಅವನನ್ನು ತಾಳಲಾರೆ, ಸಹಿಸಲಾರೆ.
  15. (ಯಾವುದೇ ಭಾರವನ್ನು) ತಾಳು; ಹೊರಲು ಶಕ್ತವಾಗಿರು; ಧರಿಸುವ ಸಾಮರ್ಥ್ಯ ಹೊಂದಿರು: the ice can bear all the activities of the skaters ಸ್ಕೇಟ್‍ ಆಟಗಾರರ ಎಲ್ಲ ಚಟುವಟಿಕೆಗಳನ್ನೂ ಹಿಮಾವೃತ ನೆಲವು ತಾಳಿಕೊಳ್ಳಬಲ್ಲುದು.
  16. ತಕ್ಕುದಾಗಿರು; ಅರ್ಹವಾಗಿರು: his language won’t bear repeating ಅವನ ಭಾಷೆ ಪುನಃ ಉಚ್ಚರಿಸುವುದಕ್ಕೆ ತಕ್ಕುದಾಗಿಲ್ಲ.
  17. (ಭಾರ ಮೊದಲಾದವನ್ನು ಪ್ರಯೋಗಿಸಿ) ದೂಡು; ನೂಕು; ತಳ್ಳು; ಸಾಗಿಸು: the crowd bore us along ಗುಂಪು ನಮ್ಮನ್ನು ತಳ್ಳಿಕೊಂಡು ಸಾಗಿತು.
  18. (ಮರ, ನೆಲ, ಮೊದಲಾದವುಗಳ ವಿಷಯದಲ್ಲಿ) ಫಲ ಕೊಡು; ಹಣ್ಣು ಬಿಡು: land bears crops ಭೂಮಿ ಬೆಳೆಯನ್ನು ಕೊಡುತ್ತದೆ.
  19. (ಮನುಷ್ಯರ, ಪ್ರಾಣಿಗಳ ವಿಷಯದಲ್ಲಿ) ಹೆರು; ಹಡೆ; ಪ್ರಸವಿಸು; ಜನ್ಮಕೊಡು.
  20. ನಡೆದುಕೊ; ವರ್ತಿಸು: he bore himself bravely ಆತ ಧೈರ್ಯದಿಂದ ನಡೆದುಕೊಂಡ.
  21. ತಳೆ; ತೋರು: bear resemblance ಹೋಲು; ಹೋಲಿಕೆ ತೋರು.
  22. ಕೋರು; ಕೇಳು; ಅಪೇಕ್ಷಿಸು: his behaviour bears watching ಅವನ ನಡತೆಯನ್ನು ಎಚ್ಚರದಿಂದ ಗಮನಿಸಬೇಕಾಗಿದೆ.
  23. (ಭೂತಕೃದಂತದಲ್ಲಿ) ಹೊರಲ್ಪಡು ಯಾ ಸಾಗಿಸಲ್ಪಡು: air-borne ವಿಮಾನದಲ್ಲಿ ಸಾಗಿಸಲ್ಪಟ್ಟ.
  24. ಎಡೆ ಕೊಡು; ಅವಕಾಶ ಕೊಡು.
ಅಕರ್ಮಕ ಕ್ರಿಯಾಪದ
  1. ಫಲಕ್ಕೆ ಬರು; ಫಲ – ಕೊಡು, ನೀಡು, ಕಚ್ಚು: next year the tree will bear ಮುಂದಿನ ವರ್ಷ ಆ ಮರ ಫಲಕ್ಕೆ ಬರುತ್ತದೆ, ಫಲ ಕಚ್ಚುತ್ತದೆ.
  2. ಹೆರು; ಹಡೆ; ಪ್ರಸವಿಸು; ಜನ್ಮಕೊಡು.
  3. ನುಗ್ಗು; ದೂಡಿಕೊಂಡು, ನುಗ್ಗಿಕೊಂಡು, ತಳ್ಳಿಕೊಂಡು – ಹೋಗು.
  4. ಪ್ರಬಲ ಪ್ರಯತ್ನ ಮಾಡು; ಶ್ರಮಿಸು.
  5. (ಒಂದು ಕಡೆಗೆ, ದಿಕ್ಕಿಗೆ) ತಿರುಗು; ಹೋಗು; ನಡೆ: bear west ಪಶ್ಚಿಮಕ್ಕೆ ತಿರುಗು, ಹೋಗು. artillery deployed to bear on the fort ಕೋಟೆಯ ಕಡೆ ತಿರುಗಿರುವಂತೆ ವ್ಯವಸ್ಥೆ ಮಾಡಿದ ಫಿರಂಗಿಗಳು.
  6. (ಒಂದು ನೆಲೆಯಲ್ಲಿ) ಇರು; ನೆಲೆಸು; ಸ್ಥಾಪಿತವಾಗು: the lighthouse bears north ಆ ದೀಪಸ್ತಂಭ ಉತ್ತರಕ್ಕಿದೆ.
  7. ಭಾರ ಬಿಡು; ಅವಲಂಬಿಸು: the old man bears heavily on the stick ಮುದುಕ ಕೋಲಿನ ಮೇಲೆ ಭಾರವನ್ನೆಲ್ಲಾ ಬಿಟ್ಟಿದ್ದಾನೆ.
  8. ಭಾರವಾಗಿರು; ಭಾರ ಹೊರಿಸು: taxation bears heavily on the poor ತೆರಿಗೆ ಬಡವರ ಮೇಲೆ ಬಹಳ ಭಾರವಾಗುತ್ತದೆ.
ಪದಗುಚ್ಛ
  1. bear a grudge (ಮನಸ್ಸಿನಲ್ಲಿ) ಹಗೆ ತಾಳು; ದ್ವೇಷ ತಳೆ; ಜಿದ್ದಿಡು.
  2. bear a hand ನೆರವಾಗು; ಸಹಾಯ ಮಾಡು.
  3. bear a part in ಭಾಗವಹಿಸು; ಭಾಗಿಯಾಗು; ಪಾಲ್ಗೊಳ್ಳು.
  4. bear away
    1. (ಬಹುಮಾನ ಮೊದಲಾದವನ್ನು) ಗೆಲ್ಲು; ಜಯಿಸು; ಹೊಡೆ.
    2. (ನಾವೆ ಹಡಗುಗಳ ವಿಷಯದಲ್ಲಿ) ಹೋಗು; ಪಯಣಿಸು; ಸಾಗು.
  5. bear company ಒಡನಿರು; ಜೊತೆಯಲ್ಲಿರು.
  6. bear down
    1. ಕೆಳಕ್ಕೆ – ಅದುಮು, ನೂಕು, ತಳ್ಳು.
    2. ಶ್ರಮಿಸು; ಕಷ್ಟಪಟ್ಟು ಪ್ರಯತ್ನಿಸು.
    3. ಸೋಲಿಸು; ಉರುಳಿಸು; ಗೆಲ್ಲು; ಮೇಲುಗೈಯಾಗು; ದಮನ ಮಾಡು; ಹತ್ತಿಕ್ಕು: bear down all resistance ಪ್ರತಿಭಟನೆಯೆಲ್ಲವನ್ನೂ ಹತ್ತಿಕ್ಕು. bear down the enemy ಹಗೆಯನ್ನು ಸೋಲಿಸು.
  7. bear down on
    1. ಕೆಳಕ್ಕೆ ಅದುಮು.
    2. ಒತ್ತಾಯಿಸು; ಒತ್ತಡ ಹಾಕು.
    3. (ಹಡಗಿನ ವಿಷಯದಲ್ಲಿ) ಗಾಳಿಯ ದಿಕ್ಕಿನಲ್ಲಿ – ಹೋಗು, ಮುಂದುವರಿ.
    4. (ಹಡಗಿನ ಯಾ ವ್ಯಕ್ತಿಯ ವಿಷಯದಲ್ಲಿ) ವೇಗವಾಗಿ ಸಮೀಪಿಸು; ವೇಗವಾಗಿ ಯಾ ಉದ್ದೇಶಪೂರ್ವಕವಾಗಿ ಒಂದರತ್ತ ಹೋಗು ಯಾ ಬರು ಯಾ ಧಾವಿಸು.
  8. bear off =
    1. = ಪದಗುಚ್ಛ \(4(a)\).
    2. (ನಾವೆ, ಹಡಗಿನ ವಿಷಯದಲ್ಲಿ) (ತೀರ ಮೊದಲಾದವುಗಳಿಂದ) ದೂರ ಸರಿ.
  9. bear oneself (well or ill etc) (ಉತ್ತಮವಾಗಿ ಯಾ ಕೆಟ್ಟ ರೀತಿಯಲ್ಲಿ ಇತ್ಯಾದಿ) ನಡೆದುಕೊ; ವರ್ತಿಸು.
  10. bear to the right etc. ಬಲ ಮೊದಲಾದ ಕಡೆಗೆ ತಿರುಗು, ಹೋಗು.
  11. bear up
    1. (ಹಡಗನ್ನು) ಗಾಳಿ ಬೀಸುವ ದಿಕ್ಕಿಗೆ ತಿರುಗಿಸು.
    2. ಹೊರು; ಎತ್ತಿಹಿಡಿ.
    3. ಎದೆಗುಂದದಿರು; ನಿರಾಶೆಗೊಳ್ಳದಿರು; ಮಣಿಯದಿರು; ತಾಳಿಕೊ; ಸಹಿಸಿಕೊ; ಧೈರ್ಯದಿಂದ ಎದುರಿಸು: he bore up well against (under) all these difficulties ಅವನು ಈ ಕಷ್ಟಗಳನ್ನೆಲ್ಲಾ ಚೆನ್ನಾಗಿ ಎದುರಿಸಿದ, ಈ ಎಲ್ಲ ಕಷ್ಟಗಳಲ್ಲಿ ಎದೆಗುಂದಲಿಲ್ಲ.
  12. bear up for ಹಡಗನ್ನು ಉದ್ದೇಶಿಸಿದ ದಿಕ್ಕಿನ ಕಡೆಗೆ ಹೋಗುವಂತೆ ತಿರುಗಿಸು.
  13. borne by Eve ಈವಳು ಗರ್ಭ ತಳೆದ; ಈವಳ ಗರ್ಭದಲ್ಲಿ ಜನಿಸಿದ.
  14. born of Eve ಈವಳಿಗೆ ಹುಟ್ಟಿದ; ಈವಳು – ಹಡೆದ, ಹೆತ್ತ, ಪ್ರಸವಿಸಿದ, ಜನ್ಮ ಕೊಟ್ಟ.
  15. bear with ಸಹನೆಯಿಂದ ವರ್ತಿಸು; ಸಹಿಸಿಕೊ; ತಾಳಿಕೊ; ತಾಳ್ಮೆಯಿಂದಿರು.
  16. bear witness ಸಾಕ್ಷಿಯಾಗು; ಸಾಕ್ಷಿ ಕೊಡು.
ನುಡಿಗಟ್ಟು
  1. bear hard on ತುಳಿ; ದಮನ ಮಾಡು; ಕಷ್ಟ ಕೊಡು; ಪೀಡಿಸು; ತೊಂದರೆ ಪಡಿಸು.
  2. bear fruits ಫಲಿಸು; ಫಲ ಕೊಡು; ಫಲಿತಾಂಶ ಕೊಡು; ಉತ್ಪನ್ನ ಕೊಡು.
  3. bear in mind ನೆನಪಿಡು; ಮನಸ್ಸಿನಲ್ಲಿಡು; ಜ್ಞಾಪಕದಲ್ಲಿಡು; ಮರೆಯದಿರು.
  4. bear out (ಸುದ್ದಿ, ವ್ಯಕ್ತಿಯು ನೀಡಿದ ನಿರೂಪಣೆ ಮೊದಲಾದವನ್ನು) ರುಜುವಾತು ಪಡಿಸು; ಸ್ಥಿರಪಡಿಸು; ನಿಜವೆಂದು ತೋರಿಸು; ದೃಢೀಕರಿಸು; ಸಮರ್ಥಿಸು; ಪುಷ್ಟೀಕರಿಸು.
  5. bear (up)on (ಯಾವುದಕ್ಕೇ) ಅನ್ವಯಿಸು; ಸಂಬಂಧಿಸು.
  6. be borne away (ಬಾಹ್ಯಬಲ ಯಾ ಪ್ರಭಾವಕ್ಕೆ, ಅಂತರಂಗದ ಪ್ರೇರಣೆಗೆ – ಹಿಡಿತ ತಪ್ಪುವಷ್ಟು) ವಶವಾಗು; ಒಳಗಾಗು; ಅಧೀನವಾಗು; ಸಿಕ್ಕಿಹೋಗು.
  7. be borne in upon (one) (ಒಬ್ಬನಿಗೆ) ಮನದಟ್ಟಾಗು; ಮನವರಿಕೆಯಾಗು; ದೃಢನಂಬಿಕೆಯಾಗು; ಮನಸ್ಸಿಗೆ – ದೃಢವಾಗು, ಖಚಿತವಾಗು.
  8. borne on the books of that company ಆ ವಾಣಿಜ್ಯಸಂಸ್ಥೆಯ ಸೇವೆಯಲ್ಲಿರುವ, ಕೆಲಸದಲ್ಲಿರುವ.
  9. bring to bear
    1. (ಬಂದೂಕು ಮೊದಲಾದವುಗಳ ವಿಷಯದಲ್ಲಿ) ಗುರಿಯಿಡು; ಕೇಂದ್ರೀಕರಿಸು.
    2. ಪರಿಣಾಮವಾಗುವಂತೆ – ಮಾಡು, ಪ್ರಯೋಗಿಸು; ಪ್ರಭಾವ ಬೀರು.