See also 2audit
1audit ಆಡಿಟ್‍
ನಾಮವಾಚಕ
  1. (ಅಧಿಕೃತ) ಲೆಕ್ಕಪರಿಶೋಧನೆ; ಆಯವ್ಯಯ ತಃಖ್ತೆ; ಲೆಕ್ಕದ ತಾಳೆ.
  2. ಲೆಕ್ಕಪರಿಶೋಧನೆಯ ವರದಿ; ಆಯವ್ಯಯ ವರದಿ; ಪರಿಶೋಧಿತ ಲೆಕ್ಕದ ಪಟ್ಟಿ.
  3. ಸೂಕ್ಷ್ಮ ವಿಚಾರಣೆ; ಮುಖ್ಯವಾಗಿ ಕ್ರೈಸ್ತರ ನಂಬಿಕೆಯಂತೆ ಕೊನೆಯ ತೀರ್ಪಿನ ದಿನ.
  4. (ಜಮೀನ್ದಾರನಿಗೂ ರೈತರಿಗೂ ಕಾಲ ಕಾಲಕ್ಕೆ ನಡೆಯುವ) ಲೆಕ್ಕ ತೀರುವೆ; ಫೈಸಲಾತಿ.
  5. (ಯಾವುದೇ ವಿಷಯದ) ಸೂಕ್ಷ್ಮ ಪರೀಕ್ಷೆ; ತನಿಖೆ.
ಪದಗುಚ್ಛ

audit ale ತಃಖ್ತೆ ಮದ್ಯ; ಹಿಂದೆ ಇಂಗ್ಲಂಡಿನ ಕಾಲೇಜುಗಳಲ್ಲಿ ತಯಾರಿಸುತ್ತಿದ್ದ, ಲೆಕ್ಕಪರಿಶೋಧನೆಯ ದಿನದಂದು ಬಳಸುತ್ತಿದ್ದ ವಿಶೇಷಮದ್ಯ.