2articulate ಆರ್ಟಿಕ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) ಕೀಲು ಜೋಡಿಸು; ಕೀಲುಗಳಿಂದ ಜೋಡಿಸು: articulated lorry ಕೀಲುಗೂಡಿಸಿದ ಲಾರಿ; ಸಲೀಸಾಗಿ ನಡೆಸಲಾಗುವಂತೆ ಭಾಗಗಳನ್ನು ಕೀಲುಗಳಿಂದ ಕೂಡಿಸಿದ ಲಾರಿ.
  2. (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) ಕೂಡಿಕೆಗಳು ಯಾ ಸೇರುವೆಗಳು ಇರುವಂತೆ ಯಾ ಕಾಣುವಂತೆ ಗುರುತಿಸು.
  3. (ಮಾತು ಯಾ ಅಕ್ಷರಗಳನ್ನು) ಭಾಗಗಳಾಗಿ – ಒಡೆ, ವಿಭಾಗಿಸು, ವಿಭಜಿಸು.
  4. ಸ್ಪಷ್ಟವಾಗಿ, ಸ್ಫುಟವಾಗಿ – ಉಚ್ಚರಿಸು.
  5. ಮಾತಿನಲ್ಲಿ ವ್ಯಕ್ತಪಡಿಸು.
  6. (ಸುಸಂಬದ್ಧವಾಗಿ) ರಚಿಸು; ಜೋಡಿಸು; ಯೋಜಿಸು: articulate a science programme for all grades ಎಲ್ಲ ವರ್ಗಗಳಿಗೂ ಹೊಂದುವಂತೆ ಒಂದು ವಿಜ್ಞಾನ ಕಾರ್ಯಕ್ರಮವನ್ನು ಸುಸಂಬದ್ಧವಾಗಿ ಯೋಜಿಸು.
ಅಕರ್ಮಕ ಕ್ರಿಯಾಪದ
  1. ಸ್ಪಷ್ಟವಾಗಿ, ಸ್ಫುಟವಾಗಿ-ಉಚ್ಚರಿಸು.
  2. ಮಾತನಾಡು.
  3. ಸೇರಿಕೊ; ಕೀಲುಗೂಡು; ಸಂದುಗೂಡಿಕೊ.