1articulate ಆರ್ಟಿಕ್ಯುಲಟ್‍
ಗುಣವಾಚಕ
  1. ಕೀಲುಳ್ಳ; ಸಂದುಳ್ಳ; ಕೀಲುಗಳಿಂದ ಕೂಡಿಸಿದ: an articulate animal ಕೀಲುಪ್ರಾಣಿ.
  2. ಕಾಣುವಂತೆ – ಜಂಟಿಸಿದ, ಕೂಡಿಸಿದ, ಜೋಡಿಸಿದ.
  3. ಸ್ಪಷ್ಟವಾಗಿ ಕಾಣಿಸುವ ಭಾಗಗಳುಳ್ಳ ಯಾ ಅಂಗಗಳುಳ್ಳ.
  4. ಸ್ಫುಟವಾಗಿ ಉಚ್ಚರಿಸಿದ; ಸ್ಪಷ್ಟೋಚ್ಚಾರಣೆಯ; ಸ್ಫುಟೋಚ್ಚರಿತ.
  5. ತಿಳಿಮಾತಿನ; ಸ್ಪಷ್ಟವಾಗಿ ತಿಳಿಸಬಲ್ಲ; ಸ್ಫುಟವಾದ ಪದಗಳುಳ್ಳ; ಅರ್ಥವಾಗುವ ಶಬ್ದಗಳ: not just a sound, but articulate speech ಬರೇ ಸದ್ದಲ್ಲ, ಅರ್ಥ ಬರುವ ಮಾತು.
  6. ಮಾತನಾಡಬಲ್ಲ; ವಾಕ್‍ಶಕ್ತಿಯುಳ್ಳ: an articulate animal ಮಾತನಾಡಬಲ್ಲ ಪ್ರಾಣಿ.
  7. ಸ್ಪಷ್ಟವಾದ; ಸ್ಫುಟವಾದ.
  8. ಸುವ್ಯವಸ್ಥಿತವಾದ; ಸುಸಂಬದ್ಧವಾದ; ಸ್ಪಷ್ಟವಾಗಿ ನಿರೂಪಿಸಿರುವ: an articulate system of philosophy ಸುಸಂಬದ್ಧವಾದ ತಾತ್ತ್ವಿಕ ಸಿದ್ಧಾಂತ.