See also 2arrest
1arrest ಅರೆಸ್ಟ್‍
ಸಕರ್ಮಕ ಕ್ರಿಯಾಪದ
  1. (ಬೆಳವಣಿಗೆ, ಚಲನೆ, ರೋಗದ ಹೆಚ್ಚಿಕೆ, ಕ್ಷಯಿಸುವುದು, ಮೊದಲಾದವನ್ನು) ತಡೆ; ತಡೆಗಟ್ಟು; ನಿಲ್ಲಿಸು; ಅಡ್ಡಹಾಕು; ಅಡ್ಡಿಯೊಡ್ಡು; ಅಡ್ಡಗಟ್ಟು; ನಿರೋಧಿಸು; ಪ್ರತಿ ಬಂಧಿಸು: arrest the growth of the plant ಗಿಡದ ಬೆಳವಣಿಗೆಯನ್ನು ತಡೆ. arrest the motion of the ball ಚೆಂಡಿನ ಚಲನೆಯನ್ನು ತಡೆ.
  2. (ಮುಖ್ಯವಾಗಿ ಕಾನೂನಿನ ಬಲದಿಂದ) (ವ್ಯಕ್ತಿಯನ್ನು ಯಾ ಹಡಗನ್ನು) ಸೆರೆಹಿಡಿ; ಕೈದು ಮಾಡು; ಬಂಧಿಸು; ದಸ್ತಗಿರಿ ಮಾಡು.
  3. (ದೃಷ್ಟಿ, ಗಮನ, ಮೊದಲಾದವನ್ನು) ಸೆಳೆ; ಆಕರ್ಷಿಸು.
  4. (ವ್ಯಕ್ತಿಯ) ಗಮನ ಸೆಳೆ.
ಪದಗುಚ್ಛ

arrest judgement (ನ್ಯಾಯಶಾಸ್ತ್ರ) ತೀರ್ಪು ತಡೆಹಿಡಿ; ತೀರ್ಪು ನೀಡಿದ ಮೇಲೆ ಅದು ತಪ್ಪಿರ ಬಹುದೆಂದು ಅದನ್ನು ತಡೆಹಿಡಿ.