3alternate ಆಲ್ಟರ್ನೇಟ್‍
ಸಕರ್ಮಕ ಕ್ರಿಯಾಪದ

ಏಕಾಂತರ ಮಾಡು; ಪರ್ಯಾಯವಾಗಿಸು; (ಎರಡು ತೆರನ ವಸ್ತು ಯಾ ಕ್ರಿಯೆಗಳ ವಿಷಯದಲ್ಲಿ) ಕ್ರಮವಾಗಿ ಬರುವಂತೆ, ಆಗುವಂತೆ–ಏರ್ಪಡಿಸು, ಮಾಡು.

  1. ಪರ್ಯಾಯವಾಗಿ ಬದಲಾಯಿಸು; ಪರಸ್ಪರ ವಿನಿಮಯಿಸು; ಒಂದರ ಸ್ಥಾನದಲ್ಲಿ ಮತ್ತೊಂದನ್ನು ಪರ್ಯಾಯವಾಗಿ–ಬಳಸು, ಇಡು, ತರು: alternate pipe and cigar ಕೊಳವಿ ಮತ್ತು ಸಿಗಾರ್‍ಗಳನ್ನು ಪರ್ಯಾಯವಾಗಿ ಬಳಸು.
ಅಕರ್ಮಕ ಕ್ರಿಯಾಪದ
  1. (ಕಾಲದಲ್ಲಾಗಲಿ, ಕ್ಷೇತ್ರದಲ್ಲಾಗಲಿ) ಪರ್ಯಾಯವಾಗು; ಏಕಾಂತರವಾಗು; ಒಂದಾದ ಮೇಲೊಂದು ವರಿಸೆಯಾಗಿ ಯಾ ಪರ್ಯಾಯವಾಗಿ ಬರು.
  2. ವಿಕಲ್ಪ ವಿಶಿಷ್ಟವಾಗಿರು; ವಿಕಲ್ಪಗಳನ್ನು ಯಾ ಪರ್ಯಾಯಗಳನ್ನು ಹೊಂದಿರು.