See also 2advocate
1advocate ಆಡ್ವಕೇ(ಕ)ಟ್‍
ನಾಮವಾಚಕ
  1. ಪಕ್ಷವಾದಿ; (ಯಾವನೇ ವ್ಯಕ್ತಿಯ ಪರವಾಗಿ) ವಾದಿಸುವವನು.
  2. (ನ್ಯಾಯಾಲಯದ ವೃತ್ತಿನಿರತ) ನ್ಯಾಯವಾದಿ; ವಕೀಲ; ಅಡ್ವೊಕೇಟ್‍.
  3. ಸಮರ್ಥಕ; (ಯಾವುದೇ ಯೋಜನೆ ಮೊದಲಾದವುಗಳ ಪರವಾಗಿ) ವಾದಿಸುವವನು; ಎತ್ತಿಹಿಡಿಯುವವನು; ಸಮರ್ಥಿಸುವವನು.
ಪದಗುಚ್ಛ
  1. devil’s advocate
    1. ಸೈತಾನನ ವಕೀಲ; ರೋಮನ್‍ ಕ್ಯಾಥೊಲಿಕ್‍ರಲ್ಲಿ ಸಂತನೆಂದು ಯಾರನ್ನೇ ಘೋಷಿಸುವಾಗಿ ಅದನ್ನು ವಿರೋಧಿಸಿ ವಾದಿಸುವವನು.
    2. ದೋಷೋದ್ಘಾಟಕ; ಪೂರ್ಣ ಸತ್ಯವನ್ನು ಬೆಳಕಿಗೆ ತರಲು ಯಾ ಚರ್ಚೆಗೆ ಅವಕಾಶ ಕೊಡಲು ದೋಷಗಳನ್ನು ಎತ್ತಿ ತೋರಿಸುವವ.
    3. ವಿತಂಡವಾದಿ; ವಾದಕ್ಕಾಗಿಯೇ ವಾದಿಸುವವ.
  2. Faculty of Advocates (ಸ್ಕಾಟ್ಲಂಡಿನ) ವಕೀಲ–ಸಂಘ. ಮಂಡಳಿ; ಅಡ್ವೊಕೇಟ್‍ ವರ್ಗ.
  3. Lord Advocate ಲಾರ್ಡ್‍ ಅಡ್ವೊಕೇಟ್‍; ಸ್ಕಾಟ್ಲಂಡಿನ ಅರಸೊತ್ತಿಗೆಯ ಪ್ರಧಾನ ನ್ಯಾಯಾಧಿಕಾರಿ.