See also 1accord
2accord ಅಕಾರ್ಡ್‍
ನಾಮವಾಚಕ
  1. ಒಮ್ಮನಸ್ಸು; (ಪರಸ್ಪರ) ಒಪ್ಪಿಗೆ; ಸಮ್ಮತಿ; ಅನುಮತಿ; ಏಕಾಭಿಪ್ರಾಯ: with one accord ಎಲ್ಲರ ಒಪ್ಪಿಗೆಯಿಂದ; ಏಕಮತದಿಂದ; ಒಮ್ಮತದಿಂದ.
  2. (ಶಾಂತಿಯ) ಸಂಧಿ; ಕೌಲು; ಕರಾರು; ಒಡಂಬಡಿಕೆ.
  3. (ಬಣ್ಣ, ರಾಗ, ಸ್ವರ–ಇವುಗಳ) ಹೊಂದಿಕೆ; ಹೊಂದಾಣಿಕೆ; ಮೇಳ; ಸಾಮರಸ್ಯ.
  4. ಇಷ್ಟ; ಇಚ್ಛೆ; ಪ್ರೇರಣೆ: he came of his own accord ಅವನು ಸ್ವಯಂ ಪ್ರೇರಣೆಯಿಂದ, ಸ್ವಂತ ಇಚ್ಛೆಯಿಂದ–ಬಂದ.
ನುಡಿಗಟ್ಟು

with one accord ಏಕಾಭಿಪ್ರಾಯದಿಂದ; ಸರ್ವಸಮ್ಮತಿಯಿಂದ; ಯಾರೂ ವಿರೋಧಿಸದೆ.