See also 2accord
1accord ಅಕಾರ್ಡ್‍
ಸಕರ್ಮಕ ಕ್ರಿಯಾಪದ
  1. (ಸ್ವಾಗತ ಮೊದಲಾದವನ್ನು) ನೀಡು; ಕೊಡು: to accord welcome ಸ್ವಾಗತ ನೀಡು.
  2. (ಪ್ರಶಸ್ತಿ ಮೊದಲಾದವನ್ನು) ಪ್ರದಾನ ಮಾಡು, ನೀಡು: the President accorded him an honorary title ಅಧ್ಯಕ್ಷರು ಆತನಿಗೆ ಗೌರವ ಬಿರುದನ್ನು ನೀಡಿದರು.
  3. ಸರಿಹೊಂದಿಸು; ಅನುರೂಪಗೊಳಿಸು; ಸಂಗತಗೊಳಿಸು; ಸಮನ್ವಯಗೊಳಿಸು: the various conclusions can be accorded by calm reasoning ಶಾಂತವಾಗಿ ವಿವೇಚಿಸಿದರೆ ಆ ವಿವಿಧ ನಿರ್ಣಯಗಳನ್ನು ಸಮನ್ವಯಗೊಳಿಸಬಹುದು.
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ವಸ್ತುಗಳ ವಿಷಯದಲ್ಲಿ) ಹೊಂದಿಕೊಂಡಿರು; ಸಮರಸವಾಗಿರು; ಅನುಗುಣವಾಗಿರು: his behaviour does not accord with his principles ಅವನ ನಡವಳಿಕೆ ಅವನ ತತ್ತ್ವಗಳಿಗೆ ಅನುಗುಣವಾಗಿಲ್ಲ.