See also 1abstract  2abstract
3abstract ಆಬ್ಸ್‍ಟ್ರಾಕ್ಟ್‍
ಸಕರ್ಮಕ ಕ್ರಿಯಾಪದ
  1. ಬೇರ್ಪಡಿಸು; ತೆಗೆ; ಪ್ರತ್ಯೇಕಿಸು; ಅಪಕರ್ಷಿಸು: abstract metal from ore ಅದಿರಿನಿಂದ ಲೋಹವನ್ನು–ಬೇರ್ಪಡಿಸು, ತೆಗೆ.
  2. (ಸೌಮ್ಯೋಕ್ತಿ) ಕದಿ; ಅಪಹರಿಸು: abstracted a purse frome his pocket ಅವನ ಜೇಬಿನಿಂದ ಹಣದ ಚೀಲವನ್ನು ಕದ್ದನು.
  3. ಅನ್ಯಮನಸ್ಕನಾಗಿಸು; ಗಮನವನ್ನು ಬೇರೆಡೆಗೆ ಸೆಳೆ; ಮನಸ್ಸನ್ನು ಎಲ್ಲಿಗೋ ಒಯ್ಯು: day-dreaming abstracted him ಹಗಲುಗನಸು ಅವನ ಮನಸ್ಸನ್ನು ಎಲ್ಲಿಗೋ ಒಯ್ದಿತು.
  4. ಭಾವರೂಪದಲ್ಲಿ ಗ್ರಹಿಸು; ಮೂರ್ತವಸ್ತುಗಳಿಂದ ಪ್ರತ್ಯೇಕವಾಗಿ ಭಾವಿಸು; ಗುಣ, ಸ್ಥಿತಿ, ಕ್ರಿಯೆ, ಮೊದಲಾದವುಗಳನ್ನು ಭಾವನೆಯ ರೂಪದಲ್ಲಿ ವಸ್ತುಗಳಿಂದ ಪ್ರತ್ಯೇಕಿಸಿ ಗ್ರಹಿಸು: we abstract greenness from green things ಹಸುರು ವಸ್ತುಗಳಿಂದ ಹಸುರನ್ನು ಪ್ರತ್ಯೇಕಿಸಿ ಗ್ರಹಿಸುತ್ತೇವೆ.
  5. ಸಂಕ್ಷೇಪಿಸು; ಸಂಗ್ರಹಿಸು.