See also 2abstract  3abstract
1abstract ಆಬ್ಸ್‍ಟ್ರಾಕ್ಟ್‍
ಗುಣವಾಚಕ
  1. ಅಮೂರ್ತ; ಚಿತ್ತಗ್ರಾಹ್ಯ; ಭಾವನಾ ಗೋಚರವಾದ; ಇಂದ್ರಿಯಗಳಿಗೆ ಅಗೋಚರವಾದ; ಭೌತದ್ರವ್ಯ, ಭೌತರೂಪ, ವ್ಯವಹಾರ ಯಾ ನಿರ್ದಿಷ್ಟ ದೃಷ್ಟಾಂತಗಳಿಂದ ಭಿನ್ನವಾದ ಯಾ ಬೇರ್ಪಡಿಸಿದ: a flower is beautiful, but beauty itself is abstract ಹೂವು ಸುಂದರವಾಗಿದೆ, ಆದರೆ ಸೌಂದರ್ಯ ಎಂಬುದು ಅಮೂರ್ತ. an abstract idea ಒಂದು ಅಮೂರ್ತ ಕಲ್ಪನೆ.
  2. ಕೇವಲ ಭಾವನಾತ್ಮಕವಾದ; ಸೈದ್ಧಾಂತಿಕ; ಪ್ರಾಯೋಗಿಕವಲ್ಲದ; ವ್ಯಾವಹಾರಿಕವಲ್ಲದ.
  3. ದುರ್ಬೋಧ: ದುರವಗಾಹ್ಯ; ದುಜ್ಞೇಯ; ಅರಿಯಲು ಕಷ್ಟವಾದ.
  4. (ಕಲೆ ಮೊದಲಾದವುಗಳ ವಿಷಯದಲ್ಲಿ) ಅಮೂರ್ತ; ಅನುಕರಿಸದ; ವಸ್ತುಗಳ ರೂಪ, ಗುಣ, ಆಕೃತಿ, ಮೊದಲಾದವುಗಳನ್ನು ಅನುಕರಿಸದ, ಪ್ರತಿಬಿಂಬಿಸದ.
ಪದಗುಚ್ಛ
  1. in the abstract ಭಾವನೆಯಾಗಿ; ತತ್ತ್ವ ಸ್ವರೂಪದಲ್ಲಿ: she has no idea of poverty but in the abstract ಕೇವಲ ಭಾವನೆಯ ರೂಪದಲ್ಲಲ್ಲದೆ ಬಡತನದ ವಿಷಯ ಅವಳಿಗೆ ಏನೂ ತಿಳಿಯದು.
  2. the abstract ಕೇವಲ ಭಾವನೆಯ ರೂಪದಲ್ಲಿರುವುದು.